Wednesday, May 8, 2024
Homeಕೊಡಗುಕೊಡಗಿನಲ್ಲಿ ಮಳೆಗೆ ಮೊದಲ ಬಲಿ: ನೀರುಪಾಲಾಗಿದ್ದ ವೃದ್ಧನ ಶವ ಪತ್ತೆ

ಕೊಡಗಿನಲ್ಲಿ ಮಳೆಗೆ ಮೊದಲ ಬಲಿ: ನೀರುಪಾಲಾಗಿದ್ದ ವೃದ್ಧನ ಶವ ಪತ್ತೆ

spot_img
- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2021ರ ಮಹಾಮಳೆಗೆ ಮೊದಲ ಬಲಿಯಾಗಿದೆ. ನಿನ್ನೆ ಕಿರು ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ಎಪ್ಪತ್ತು ವರ್ಷದ ವೃದ್ಧ ಚಿಣ್ಣಪ್ಪ ಅವರ ಮೃತದೇಹ ಇಂದು ಪತ್ತೆಯಾಗಿದೆ.‌ ಮಡಿಕೇರಿ ತಾಲೂಕಿನ ಅವ್ವಂದೂರು ಗ್ರಾಮದಲ್ಲಿ ಘಟನೆ ನಡೆದಿದೆ.‌ ತೊರೆಯಲ್ಲಿ ಗಿಡಗಂಟಿಗಳ ಮಧ್ಯೆ ಸಿಲುಕಿ ಕೊಂಡಿದ್ದ ದೇಹವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಎನ್ ಡಿಆರ್ ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ಭಾರೀ ಮಳೆ ಸುರಿದ ಪರಿಣಾಮ ನಿನ್ನೆ ತೊರೆ ದಾಟುವಾಗ ನೀರಿನಲ್ಲಿ ವೃದ್ಧ ಚಿಣ್ಣಪ್ಪ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.‌

ಇನ್ನು ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಭಾರೀ ಗಾಳಿ‌ ಮಳೆಗೆ ಜನಜೀವನ ತತ್ತರಿಸಲ್ಪಪಟ್ಟಿದೆ. ಹಲವೆಡೆ ಮರಗಳು ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ರಸ್ತೆಗಳು ಬಂದ್ ಆಗಿ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

- Advertisement -
spot_img

Latest News

error: Content is protected !!