- Advertisement -
![]()
- Advertisement -
ಬಂಟ್ವಾಳ: ಇಲ್ಲಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ವತಿಯಿಂದ ಚಿಂವ್ ಚಿಂವ್ ಅಭಿಯಾನವನ್ನು ಆಯೋಜಿಸಲಾಯಿತು.
ಅಭಿಯಾನಕ್ಕೆ ಮುಖ್ಯಶಿಕ್ಷಕಿ ಸಿ| ನವೀನ ಎ.ಸಿ. ಚಾಲನೆ ನೀಡಿ, ‘ವಾತಾವರಣದಲ್ಲಿ ಬದಲಾವಣೆ ಹಾಗೂ ತಾಪಮಾನ ಹೆಚ್ಚಾದಂತೆ ಪಕ್ಷಿಗಳು ತಮ್ಮ ಆಹಾರವನ್ನು ಹುಡುಕಿಕೊಂಡು ವಲಸೆ ಹೋಗುತ್ತದೆ. ಈ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರಿನ ಅವಶ್ಯಕತೆ ಬಹಳಷ್ಟಿರುತ್ತದೆ. ಇದಕ್ಕಾಗಿ ಪಕ್ಷಿಗಳಿಗೆ ನೀರುಣಿಸಲು ಗೆರಟೆಗಳ ಅವಶ್ಯಕತೆಯಿದೆ,’ ಎಂದರು.
117 ವಿದ್ಯಾರ್ಥಿಗಳು ಶಿಕ್ಷಕ ರೋಶನ್ ಪಿಂಟೋ ಅವರ ನೇತೃತ್ವದಲ್ಲಿ ಗೆರಟೆಯನ್ನು ಉಪಯೋಗಿಸಿ 252 ನೀರುಣಿಸುವ ಪಾತ್ರೆಗಳನ್ನು ಮಾಡಿ ಮರಗಿಡಗಳಲ್ಲಿ ಅಳವಡಿಸುವ ಕಾರ್ಯವನ್ನು ಮಾಡಿದರು.
ಕಾರ್ಯಕ್ರಮವನ್ನು ಶಾನ್ವಿ ನಿರ್ವಹಿಸಿದರು. ಕೀರ್ತನ್ ಸ್ವಾಗತಿಸಿದರು. ಆಶಫನ್ ಅವರು ವಂದಿಸಿದರು.
- Advertisement -


