Sunday, May 19, 2024
Homeಮನರಂಜನೆಕೊನೆಗೂ ಮೇಘನಾ ರಾಜ್ ಮುಖದಲ್ಲಿ ನಗು ಮೂಡಿಸಿದ ಚಿರು ಸರ್ಜಾ ಗೆಳೆಯರು..

ಕೊನೆಗೂ ಮೇಘನಾ ರಾಜ್ ಮುಖದಲ್ಲಿ ನಗು ಮೂಡಿಸಿದ ಚಿರು ಸರ್ಜಾ ಗೆಳೆಯರು..

spot_img
- Advertisement -
- Advertisement -

ಬೆಂಗಳೂರು   ನಿಜಕ್ಕೂ ಈ ಲೇಖನ ಓದಿದೆ ಮೇಲೆ ನಮಗೂ ಇಂತಹ  ಗೆಳೆಯರು ಇರಬಾರದೇ ಅಂತಾ ಯಾರಾದ್ರು ಅಂದುಕೊಳ್ಳದೇ ಇರಲಾರರು. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ನಿಜಕ್ಕೂ ಅದೃಷ್ಟವಂತರು.

ಚಿರಂಜೀವಿ ಸರ್ಜಾ ನಮ್ಮನೆಲ್ಲಾ ಬಿಟ್ಟು ಹೋಗಿ  ಒಂದು ತಿಂಗಳಾಗುತ್ತಾ ಬಂತು. ಈಗಲೂ ಅವರಿಲ್ಲ ಅನ್ನೋ ದುಃಖವನ್ನು ಅರಗಿಸಿಕೊಳ್ಳೋದಕ್ಕೆ ಅವರ ಕುಟುಂಬಕ್ಕಾಗಲಿ ಇಲ್ಲ ಅವರ ಅಭಿಮಾನಿಗಳಿಗಾಗಲಿ ಆಗುತ್ತಿಲ್ಲ. ಮೇಘನಾ ರಾಜ್ ಅವರನ್ನು ನೋಡಿದ್ರಂತೂ ಅಯ್ಯೋ ! ಜೀವನ ಇಷ್ಟೆನಾ ಅನ್ನಿಸಿ ಬಿಡುತ್ತಿತ್ತು. ಹಾಗಾಗಿ ಅವರ ಮುಖದಲ್ಲಿ ಮತ್ತೆ ನಗು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಚಿರು ಹಾಗೂ ಮೇಘನಾ ಆಪ್ತರು.

ತುಂಬು ಗರ್ಭಿಣಿಯಾಗಿರುವ ಮೇಘನಾ ಅವರನ್ನು ಖುಷಿಯಾಗಿ ನೋಡಿ ಕೊಳ್ಳೋದಕ್ಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಚಿರು ಹಾಗು ಮೇಘನಾ ರಾಜ್ ಸ್ನೇಹಿತರು. ಇವರಿಗೆ ಬಹಳ ಆಪ್ತರಾದ  ಪನ್ನಗಾಭರಣ, ಪ್ರಜ್ವಲ್ ದೇವರಾಜ್, ಸೇರಿದಂತೆ ಹಲವಾರು ಸ್ನೇಹಿತರು ಮೇಘನಾ ರಾಜ್ ಅವರಿಗೆ ಮುಖದಲ್ಲಿ ಖುಷಿ ತರುವ ಕೆಲಸ ಮಾಡಿದ್ದಾರೆ.

ಈ ಬಗ್ಗೆ ಮೇಘನಾ ರಾಜ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

ನನ್ನ ಪ್ರೀತಿಯ ಚಿರು “ನೀನು ಎಂದರೆ ಅದು ಒಂದು  ಸೆಲೆಬ್ರೇಷನ್“, ಯಾವಾಗಲು ನೀನು ಖುಷಿಯಿಂದ ಇರುತ್ತಿದ್ದಿ, ಬೇರೆ ಅವರಿಗೆ ಖುಷಿ ಕೊಡುತ್ತಿದ್ದೆ. ನಾನು ಇವತ್ತು ನಗುತ್ತಿರುವುದಕ್ಕೆ ಕಾರಣ ನೀನು ಚಿರು! ನೀನು ನನಗೆ ಒಂದೊಳ್ಳೆ ಕುಟುಂಬವನ್ನು ಕೊಟ್ಟು ಹೋಗಿದ್ದೀಯಾ ! ಈಗ ನೀನು ನನ್ನ ಜೊತೆ ಇಲ್ಲ, ಆದರೂ ನಮ್ಮ ಕುಟುಂಬದಂತೆ ಇದ್ದ ನಮ್ಮ ಎಲ್ಲಾ ಸ್ನೇಹಿತರು ನಿನಗೆ ಹೇಗೆ ಬೇಕೋ ಹಾಗೆ ನನ್ನನ್ನು ಬಹಳ ಖುಷಿಯಿಂದ, ಸಂತೋಷದಿಂದ ನೋಡಿಕೊಳ್ಳುತ್ತಿದ್ದಾರೆ. WE LOVE YOU BABY MA ” ಎಂದು ಮೇಘನಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಗೆಳೆಯರ ಜೊತೆಗಿನ ಒಂದು ಸುಂದರ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ! ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

- Advertisement -
spot_img

Latest News

error: Content is protected !!