Saturday, June 6, 2026
Homeಕರಾವಳಿಉಡುಪಿಉಡುಪಿ: ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಲು ಹೊಂಡಗುಂಡಿಯ ರಸ್ತೆಯಲ್ಲಿ ಹೆರಿಗೆ !

ಉಡುಪಿ: ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಲು ಹೊಂಡಗುಂಡಿಯ ರಸ್ತೆಯಲ್ಲಿ ಹೆರಿಗೆ !

- Advertisement -
- Advertisement -

ಸೈರನ್ ಮೊಳಗಿಸುತ್ತ ಆಂಬ್ಯುಲೆನ್ಸ್ ಹೋಗುತ್ತಿದ್ದಂತೆ ಸಾರ್ವಜನಿಕರು ರಸ್ತೆಯುದ್ದಕ್ಕೂ ನಿಂತಿದ್ದರು. ಅವರು ನೋಡುತ್ತಿದ್ದಂತೆಯೇ ಆಂಬುಲೆನ್ಸ್ ರಸ್ತೆಯ ಮಧ್ಯದಲ್ಲಿ ನಿಂತಿತು.

ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಅವರು ಗರ್ಭಿಣಿಯನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ, ರಸ್ತೆಯ ದೊಡ್ಡ ಹೊಂಡಗಳಿಂದ ಮಹಿಳೆ ಆಂಬ್ಯುಲೆನ್ಸ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಗುಂಡಿಬೈಲ್-ಅಡ್ಕದಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ.

ಘಟನೆ ನಿಜವಲ್ಲ ಹಲವು ವರ್ಷಗಳಿಂದ ಸಂಪೂರ್ಣ ಹಾಳಾಗಿರುವ ರಸ್ತೆಯ ದುಸ್ಥಿತಿಯನ್ನು ಬೆಳಕಿಗೆ ತರಲು ನಡೆಸಿದ ಈ ಕಸರತ್ತು ಇದಾಗಿದೆ.

ಅಣಕು ಕಾರ್ಯಾಚರಣೆಯಲ್ಲಿ ಸಮಾಜ ಸೇವಕರು ತಾಯಿ ಮತ್ತು ಮಗುವಿನ ಮನುಷ್ಯಾಕೃತಿಗಳನ್ನು ಬಳಸಿದರು. ಅಸ್ವಸ್ಥರು ಹಾಗೂ ಗರ್ಭಿಣಿಯರನ್ನು ರಸ್ತೆಯಲ್ಲಿ ಆಸ್ಪತ್ರೆಗೆ ಸಾಗಿಸುವುದು ತುಂಬಾ ಕಷ್ಟಕರವಾಗಿದ್ದು, ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು. ಗುಂಡಿಬೈಲ್-ಅಡ್ಕದಕಟ್ಟೆ ರಸ್ತೆಯಲ್ಲೂ ಮಳೆಗಾಲದಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ.

- Advertisement -

Latest News

error: Content is protected !!