Tuesday, May 21, 2024
Homeತಾಜಾ ಸುದ್ದಿಬೈಕ್ ನಲ್ಲಿ ಹೋಗುತ್ತಿದ್ದಾಗ ಅಮ್ಮನ ಕೈಯಿಂದ ಬಿದ್ದು ಹಸುಗೂಸು ಸಾವು

ಬೈಕ್ ನಲ್ಲಿ ಹೋಗುತ್ತಿದ್ದಾಗ ಅಮ್ಮನ ಕೈಯಿಂದ ಬಿದ್ದು ಹಸುಗೂಸು ಸಾವು

spot_img
- Advertisement -
- Advertisement -

ಮಂಡ್ಯ: ದ್ವಿಚಕ್ರ ವಾಹನದಲ್ಲಿ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಎಷ್ಟು ಎಚ್ಚರಿಕೆ ವಹಿಸಿದ್ರೂ ಸಾಕಾಗೋದಿಲ್ಲ. ಇದೇ ರೀತಿ ಬೈಕಿನಲ್ಲಿ ಹೋಗುವಾಗ ಅಮ್ಮನ ಮಡಿಲಿನಲ್ಲಿ ಕೂತಿದ್ದ ಒಂದು ವರ್ಷದ ಮಗು ದಿಢೀರನೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದ ಕಿರಂಗೂರು ಗ್ರಾಮದ ಬಳಿ ನಡೆದಿದೆ.

ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ. ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಿರಂಗದೂರು ಗ್ರಾಮದ ಬಳಿಯ ಹಂಪ್ಸ್ ಬಳಿ ಶಿವಕುಮಾರ್ ತಮ್ಮ ಬೈಕನ್ನು ನಿಧಾನವಾಗಿ ಹಂಪ್ ಹತ್ತಿಸಿದ್ದಾರೆ. ರಂಜಿತಾ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬೈಕ್ ಹಂಪ್ಸ್ ಹತ್ತಿದ ವೇಳೆ ಮಗು ರಂಜಿತಾ ಅವರ ಕೈಯಿಂದ ಜಾರಿ ರಸ್ತೆಗೆ ಬಿದ್ದಿದೆ. ಈ ವೇಳೆ ಮಗು ತೀವ್ರವಾಗಿ ಗಾಯಗೊಂಡಿದೆ. ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಮಗು ಕೊನೆಯುಸಿರೆಳೆದಿದೆ.

ಮಗುವವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -
spot_img

Latest News

error: Content is protected !!