Wednesday, June 24, 2026
Homeತಾಜಾ ಸುದ್ದಿವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಸಿಕ್ಕಿಬಿದ್ದ ನಾಲ್ವರು ಖದೀಮರು

ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಸಿಕ್ಕಿಬಿದ್ದ ನಾಲ್ವರು ಖದೀಮರು

- Advertisement -
- Advertisement -

ಮೈಸೂರು: ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ನಾಲ್ವರು ಸಿಕ್ಕಿ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನವೀನ್, ಶಿವರಾಜು,ಹರೀಶ್, ವಿಜಿ ಮತ್ತು ಅನಿತಾ ಎಂಬುವವರು ಬಂಧಿತ ಆರೋಪಿಗಳು. ಈ  ನಾಲ್ವರು ಮೈಸೂರಿನ ಪಿರಿಯಾಪಟ್ಟಣ ನಿವಾಸಿಗಳು. ಬಂಧಿತರು ಅನಿತಾ ಎಂಬ ಯುವತಿಯನ್ನು ಬಳಸಿಕೊಂಡು ಹನಿಟ್ರಾಪ್​ ಮಾಡುತ್ತಿದ್ದರು. ಈ ತಂಡ ಮೈಸೂರಿನ ಖಾಸಗಿ ವೈದ್ಯರೊಬ್ಬರನ್ನ ಹನಿಟ್ರಾಪ್ ಜಾಲಕ್ಕೆ ಬೀಳಿಸಿದ್ದರು. ಯುವತಿ ಹಾಗೂ 4 ಮಂದಿ ಆರೋಪಿಗಳು ಖಾಸಗಿ ವೈದ್ಯರ ಬಳಿ ಒಂದು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಖಾಸಗಿ ವೈದ್ಯ, ಯುವತಿಯೊಂದಿಗೆ ಇರುವ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು, ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು. ಹಣ ನೀಡದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಬೆದರಿಕೆ ಹಾಕಿದ್ದ ಖದೀಮರು, ಖಾಸಗಿ ವೈದ್ಯರಿಂದ 31 ಲಕ್ಷದ 30 ಸಾವಿರ ರೂಪಾಯಿಯನ್ನು ಪೀಕಿದ್ದಾರೆ.

ಖಾಸಗಿ ವೈದ್ಯ ಪಿರಿಯಾಪಟ್ಟಣದಲ್ಲಿ ವಾಸವಿದ್ದಾಗ ಈ ಘಟನೆ ನಡೆದಿದೆ. ಹಾಗಾಗಿ 2019 ಡಿಸೆಂಬರ್‌ನಿಂದ 2020 ಅಕ್ಟೋಬರ್ ತಿಂಗಳವರೆಗೂ ಬಾಬು ಬಳಿ ಹಣ ವಸೂಲಿ ಮಾಡಿದ್ದಾರೆ. ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದ ಖಾಸಗಿ ವೈದ್ಯ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಹನಿಟ್ರ್ಯಾಪ್​ಗೆ ಬಳಕೆಯಾಗಿದ್ದ ಯುವತಿ ಸೇರಿದಂತೆ 5 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

- Advertisement -

Latest News

error: Content is protected !!