Friday, June 26, 2026
Homeತಾಜಾ ಸುದ್ದಿBREAKING: ಚಿಕ್ಕನಾಯಕನಹಳ್ಳಿ: ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಲಿಂಗೈಕ್ಯ

BREAKING: ಚಿಕ್ಕನಾಯಕನಹಳ್ಳಿ: ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಲಿಂಗೈಕ್ಯ

- Advertisement -
- Advertisement -

ಚಿಕ್ಕನಾಯಕನಹಳ್ಳಿ: (ತುಮಕೂರು ಜಿಲ್ಲೆ): ತಾಲ್ಲೂಕಿನ ಗೋಡೇಕೆರೆ ಮಠದ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ (65) ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮಠದಲ್ಲಿಯೇ ಮೃತಪಟ್ಟರು.

ಗೋಡೆಕೆರೆಯಲ್ಲಿ ಸಿದ್ದರಾಮೇಶ್ವರರ ತೋರುಗದ್ದುಗೆ‌ (ತಪೋನುಷ್ಠಾನ ಮಾಡಿದ ಸ್ಥಳ) ಇದ್ದು ಈ ಗದ್ದುಗೆಯೇ ಮಠವಾಗಿ ಪ್ರವರ್ಧಮಾನಕ್ಕೆ ಬಂದಿತ್ತು. ತೋರು ಗದ್ದುಗೆಯ ಕಾರಣದಿಂದ ಜಿಲ್ಲೆಯ ಪ್ರಮುಖ ಮಠವಾಗಿಯೂ ಇದು ಗುರುತಿಸಿಕೊಂಡಿತ್ತು.

ತಿಪಟೂರು ತಾಲ್ಲೂಕಿನ ಕೆ ಬಿ ಕ್ರಾಸ್ ಶಾಖಾ ಮಠದಲ್ಲಿ ರಂಭಾಪುರಿ ವಿದ್ಯಾಸಂಸ್ಥೆಯನ್ನು ಸ್ವಾಮೀಜಿ ಮುನ್ನಡೆಸುತ್ತಿದ್ದರು.

ಸ್ವಾಮೀಜಿ ಅವರು 1965 ರಲ್ಲಿ‌ ಮಠದ ಅಧ್ಯಕ್ಷತೆ ವಹಿಸಿಕೊಂಡರು. ನಾಳೆ ಕ್ರಿಯಾ ಸಮಾಧಿ ನಡೆಯಲಿದೆ. ಶ್ರೀಗಳ ನಿಧನಕ್ಕೆ ಗಣ್ಯರು ಹಾಗೂ ಭಕ್ತಾದಿಗಳು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!