Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ವಿಶ್ವ ಶಾಂತಿಪಾಲನಾ ಪಡೆಗೆ ಎಡಿಷನಲ್ ಎಸ್ಪಿ ಶೃತಿ ಆಯ್ಕೆ

ಚಿಕ್ಕಮಗಳೂರು: ವಿಶ್ವ ಶಾಂತಿಪಾಲನಾ ಪಡೆಗೆ ಎಡಿಷನಲ್ ಎಸ್ಪಿ ಶೃತಿ ಆಯ್ಕೆ

- Advertisement -
- Advertisement -

ಚಿಕ್ಕಮಗಳೂರು ಜಿಲ್ಲೆಯ ಎಡಿಷನಲ್ ಎಸ್ಪಿ ಎನ್.ಎಸ್ . ಶೃತಿ ಅವರು ವಿಶ್ವ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದಾರೆ.

ಭಾರತ ದೇಶದಿಂದ ಈ ಬಾರಿ ಒಟ್ಟು 64 ಮಂದಿ ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಶೃತಿ ಹಾಗೂ ಎಸಿಪಿ ಜಗದೀಶ್ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೃತಿ.ಎನ್.ಎಸ್ ಅವರು ನಂತರ ಚಿಕ್ಕಮಗಳೂರು ಜಿಲ್ಲೆಯ ಎಡಿಷನಲ್ ಎಸ್ಪಿಯಾಗಿ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಭ್ರಷ್ಟ ಅಧಿಕಾರಿಗಳನ್ನು ಸದೆಬಡೆದು ಜೈಲಿಗಟ್ಟಿದ ಕೀರ್ತಿ ಎನ್.ಎಸ್.ಶೃತಿ ಅವರಿಗೆ ಇದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಇವರಿಬ್ಬರೂ ಅತ್ಯುತ್ತಮ ಸಾಧನೆ ತೋರಿದ್ದಾರೆ . ಶೃತಿ ಮೂಲತ : ಮಡಿಕೇರಿಯವರು. ಅರಸೀಕೆರೆಯಲ್ಲಿ ಪ್ರೊಬೆಶನರಿ ಹುದ್ದೆ ನಿರ್ವಹಿಸುವ ಮೂಲಕ ಪೊಲೀಸ್ ಎನ್.ಎಸ್ . ಶೃತಿ ಇಲಾಖೆ ಪ್ರವೇಶಿಸಿದ ಇವರು ಶಿಖಾರಿಪುರ , ಪಾಂಡೇಶ್ವರ ಉಪ ವಿಭಾಗ , ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

- Advertisement -

Latest News

error: Content is protected !!