Monday, June 8, 2026
Homeತಾಜಾ ಸುದ್ದಿತಂದೆಯ ಜ್ಯುವೆಲ್ಲರಿ ಶಾಪ್‍ನಿಂದ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಮಗ

ತಂದೆಯ ಜ್ಯುವೆಲ್ಲರಿ ಶಾಪ್‍ನಿಂದ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಮಗ

- Advertisement -
- Advertisement -

ಚೆನ್ನೈ: ಸ್ವಂತ ಮಗನೇ ತನ್ನ ತಂದೆಯ ಮಾಲೀಕತ್ವದ ಜ್ಯುವೆಲ್ಲರಿ ಶಾಪ್ ನಿಂದ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.

ಆರೋಪಿ ಮಗನನ್ನು ಎಸ್ ಹರ್ಷ ಬೋತ್ರಾ(24) ನನ್ನು ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಹೊರಗಿನವರ ಕೈವಾಡ ಇರಬಹುದೆಂದು ಶಂಕಿಸಿದ್ದಾರೆ. ಆದರೆ ಈ ಸಂಬಂಧ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಜ್ಯುವೆಲ್ಲರಿ ಶಾಪ್ ಬಳಿ ಮಾಲೀಕ ಸುಭಾಶ್ ಚಂದ್ರ ಬೋತ್ರಾನ ಮಗ ಹರ್ಷಾ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

ಹರ್ಷ ಆನ್‍ಲೈನ್ ವಹಿವಾಟಿನಲ್ಲಿ ಆಗಿರುವ 1.5 ಕೋಟಿ ನಷ್ಟವನ್ನು ಸರಿದೂಗಿಸಲು ಚಿನ್ನ ಕದ್ದಿದ್ದಾನೆ ಎಂದು ಹೇಳಿದ್ದಾನೆ. ವಿಚಾರಣೆಯ ವೇಳೆ ಆಗಿರುವ ನಷ್ಟವನ್ನು ಮರುಪಾವತಿಸಿದ ಬಳಿಕ ಹರ್ಷಾ ಎಲ್ಲಾ ಚಿನ್ನವನ್ನು ವಾಪಸ್ ಮಾಡುವ ಪ್ಲಾನ್ ಮಾಡಿರುವುದಾಗಿ ತಿಳಿಸಿದ್ದನು.

- Advertisement -

Latest News

error: Content is protected !!