Thursday, June 4, 2026
Homeಕರಾವಳಿಕಡಬದಲ್ಲಿ ಮತ್ತೆ ಶುರುವಾಗಿದೆ ಚಿರತೆ ಕಾಟ: ಸಾಕು ನಾಯಿ ಮೇಲೆ ದಾಳಿ

ಕಡಬದಲ್ಲಿ ಮತ್ತೆ ಶುರುವಾಗಿದೆ ಚಿರತೆ ಕಾಟ: ಸಾಕು ನಾಯಿ ಮೇಲೆ ದಾಳಿ

- Advertisement -
- Advertisement -

ಕಡಬ: ಮೊನ್ನೆಯಷ್ಟೇ ಕಡಬದಲ್ಲಿ ದಂಪತಿ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹಿಡಿಯಲಾಗಿತ್ತು. ಇದೀಗ ಮತ್ತೆ  ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸಾಕು ನಾಯಿಯೊಂದರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಇಲ್ಲಿನ  ರೆಂಜಿಲಾಡಿಯಲ್ಲಿ ಎಳುವಾಳೆ ಭಾಸ್ಕರ ಗೌಡ ಎಂಬವರ ಮನೆಯ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆಯಿಂದ ನಾಯಿ ಹೇಗೋ ತಪ್ಪಿಸಿಕೊಂಡಿದೆ.  ಅಲ್ಲದೇ ಮನೆಯ ಅಂಗಳದಲ್ಲಿ ಚಿರತೆ ಗುರುತು ಪತ್ತೆಯಾಗಿದೆ. ಈ ಪರಿಸರದಲ್ಲಿ ಎರಡು ಚಿರತೆಗಳು ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಚಿರತೆ ಕಾಣ ಸಿಕ್ಕಿದೆ ಎನ್ನಲಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

- Advertisement -

Latest News

error: Content is protected !!