Saturday, June 6, 2026
Homeಅಪರಾಧಚೆಕ್‌ ಬೌನ್ಸ್‌ ಪ್ರಕರಣ; ಆರೋಪಿಗೆ ದಂಡ ವಿಧಿಸಿದ ನ್ಯಾಯಾಲಯ

ಚೆಕ್‌ ಬೌನ್ಸ್‌ ಪ್ರಕರಣ; ಆರೋಪಿಗೆ ದಂಡ ವಿಧಿಸಿದ ನ್ಯಾಯಾಲಯ

- Advertisement -
- Advertisement -

ಪುತ್ತೂರು: ಇಲ್ಲಿನ ನ್ಯಾಯಾಲಯವು ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನಿಗೆ ದಂಡ ವಿಧಿಸಿದೆ.

ಶಿಕ್ಷೆಗೆ ಒಳಗಾದ ವ್ಯಕ್ತಿ ಉಡುಪಿ ಸಂತೆಕಟ್ಟೆ ಗೋಪಾಲಪುರ ನಿವಾಸಿ ಅನಿಲ್‌ರಾಜ್‌ ಲೂವಿಸ್‌ ಎಂದು ತಿಳಿದು ಬಂದಿದೆ. ದೂರು ನೀಡಿದವರು ಪುತ್ತೂರಿನ ಫ್ರಾನ್ಸಿಸ್‌ ಡಿ’ಸೋಜಾ.

ಅನಿಲ್‌ರಾಜ್‌ ಲೂವಿಸ್‌ ಅವರು  ಫ್ರಾನ್ಸಿಸ್‌ ಡಿ’ಸೋಜಾ ಅವರಿಂದ ವೈಯುಕ್ತಿಕ ಸಾಲ ಪಡೆದಿದ್ದರು. ಅನಿಲ್‌ರಾಜ್‌ ಲೂವಿಸ್‌ ಫ್ರಾನ್ಸಿಸ್‌ ಡಿ’ಸೋಜಾ ಅವರಿಗೆ ಚೆಕ್ ಅನ್ನು ಕೂಡ ನೀಡಿದ್ದು, ಚೆಕ್‌ ನಗದೀಕರಣಕ್ಕೆ ಬ್ಯಾಂಕ್‌ಗೆ ಹಾಕಿದಾಗ ಚೆಕ್‌ ಬೌನ್ಸ್‌ ಆಗಿದೆ. ಈ ಬಗ್ಗೆ ಅನಿಲ್‌ರಾಜ್‌ ಲೂವಿಸ್‌ ವಿರುದ್ಧ ಪುತ್ತೂರು ಪ್ರಧಾನ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಚೆಕ್‌ ಮೊತ್ತದ ದಂಡ ಮತ್ತು ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದೂರುದಾರರ ಪರ ಪುತ್ತೂರಿನ ವಕೀಲ ಸೂರ್ಯನಾರಾಯಣ ಭಟ್‌ ವಾದ ಮಂಡಿಸಿದ್ದರು.

- Advertisement -

Latest News

error: Content is protected !!