Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ಚಪ್ಪಲಿ ಹೊಲಿಯುವ ಅಂಗಡಿಯಲ್ಲಿ ಕಳ್ಳತನ; 40 ಸಾವಿರ ನಗದು ಸೇರಿ ₹ 1.35 ಲಕ್ಷ...

ಮಂಗಳೂರು: ಚಪ್ಪಲಿ ಹೊಲಿಯುವ ಅಂಗಡಿಯಲ್ಲಿ ಕಳ್ಳತನ; 40 ಸಾವಿರ ನಗದು ಸೇರಿ ₹ 1.35 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನ

- Advertisement -
- Advertisement -

ಮಂಗಳೂರು: ಚಪ್ಪಲಿ ಹೊಲಿಯುವ ಅಂಗಡಿಗೆ ನುಗ್ಗಿದ ಕಳ್ಳ 40 ಸಾವಿರ ರೂಪಾಯಿ ನಗದು ಸೇರಿ ₹ 1.35 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಬಂಟ್ಸ್ ಹಾಸ್ಟೆಲ್ ಬಳಿ ರಾಮಕೃಷ್ಣ ಕಾಲೇಜಿನ ಪಕ್ಕದಲ್ಲಿ ನಡೆದಿದೆ.

ಚರ್ಮ ಕುಟೀರದ ಪೆಟ್ಟಿಗೆ ಅಂಗಡಿಯಿಂದ ಛತ್ರಿ, ಚಪ್ಪಲಿ ಹಾಗೂ ₹ 40 ಸಾವಿರ ನಗದು ಸೇರಿ ₹ 1.35 ಲಕ್ಷ ಮೌಲ್ಯದ ಸ್ವತ್ತು ಕಳವಾದ ಬಗ್ಗೆ ನಗರ ಪೂರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಆಗಸ್ಟ್ 30 ಸಂಜೆ 7.30 ಗಂಟೆಗೆ ಅಂಗಡಿ ಮುಚ್ಚಿದ್ದೆ. ಮರುದಿನ ಬೆಳಿಗ್ಗೆ 9ಕ್ಕೆ ಬಂದು ನೋಡಿದಾಗ ಅಂಗಡಿಯ ಬಾಗಿಲು ತೆರೆದಿತ್ತು. ಅಂಗಡಿಯಲ್ಲಿಟ್ಟಿದ್ದ, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ನಗದೀಕರಿಸಿದ್ದ ₹40 ಸಾವಿರ ನಗದು, 30 ಛತ್ರಿಗಳು ಹಾಗೂ 50 ಜೊತೆ ಚಪ್ಪಲಿಗಳು ಕಳುವಾಗಿದ್ದವು. ಕಳುವಾದ ಛತ್ರಿ ಮತ್ತು ಚಪ್ಪಲಿಗಳ ಅಂದಾಜು ಮೌಲ್ಯ ₹ 95ಸಾವಿರ’ ಎಂದು ಅಂಗಡಿ ಮಾಲೀಕ ರಾಮ ಎಸ್.ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!