Saturday, June 6, 2026
Homeಕರಾವಳಿಮಂಗಳೂರು; ಫೈನಾನ್ಸ್ ನಲ್ಲಿ ನಕಲಿ ಚಿನ್ನಾಭರಣವಿರಿಸಿ ವಂಚನೆ

ಮಂಗಳೂರು; ಫೈನಾನ್ಸ್ ನಲ್ಲಿ ನಕಲಿ ಚಿನ್ನಾಭರಣವಿರಿಸಿ ವಂಚನೆ

- Advertisement -
- Advertisement -

ಮಂಗಳೂರು: ಫೈನಾನ್ಸ್ ನಲ್ಲಿ ಸಾಲ ಪಡೆಯಲು ಮೂವರು ವ್ಯಕ್ತಿಗಳು ನಕಲಿ ಚಿನ್ನಾಭರಣವಿರಿಸೋದು ಇದೀಗ ಬಯಲಾಗಿದೆ.  ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಮೂವರು 401.7 ಗ್ರಾಂ ಚಿನ್ನಾಭರಣಗಳನ್ನು ಇರಿಸಿದ್ದರು. ಅದು ನಕಲಿ ಆಗಿವೆ ಎಂದು ಪ್ರಾದೇಶಿಕ ಮುಖ್ಯಸ್ಥ ಬಂಡಿ ಜನಾರ್ದನ ರೆಡ್ಡಿ ಅವರು ನಗರದ ದಕ್ಷಿಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

2020ರ ಸೆ. 12ರಿಂದ 2021ರ ಫೆ 18ರ ನಡುವೆ ಮೂವರು ಒಟ್ಟು 401.7 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹ 13.12 ಲಕ್ಷ ಸಾಲ ಪಡೆದಿದ್ದರು. ಅವರು ಸಾಲವನ್ನೂ ಮರುಪಾವತಿಸಿಲ್ಲ. ಅವರು ಅಡವಿಟ್ಟ ಚಿನ್ನ 22 ಕ್ಯಾರೆಟ್‌ನದ್ದಲ್ಲ. ಉದ್ದೇಶಪೂರ್ವಕವಾಗಿ ನಕಲಿ ಚಿನ್ನ ಅಡವಿಟ್ಟು ಅವರು ಸಂಸ್ಥೆಗೆ ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!