Thursday, June 4, 2026
Homeಕರಾವಳಿಚಾರ್ಮಾಡಿ ಘಾಟಿ ರಸ್ತೆಯಲ್ಲೇ ಪುಂಡರ ಮೋಜು-ಮಸ್ತಿ: ಅಪಾಯಕಾರಿ ಜಾಗಗಳಲ್ಲಿ ಸೆಲ್ಫಿಯ ಹುಚ್ಚಾಟ

ಚಾರ್ಮಾಡಿ ಘಾಟಿ ರಸ್ತೆಯಲ್ಲೇ ಪುಂಡರ ಮೋಜು-ಮಸ್ತಿ: ಅಪಾಯಕಾರಿ ಜಾಗಗಳಲ್ಲಿ ಸೆಲ್ಫಿಯ ಹುಚ್ಚಾಟ

- Advertisement -
- Advertisement -

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಎಡೆಬಿಡದೇ ಸುರಿಯುತ್ತಿರುವಂತ ಮಳೆಯ ನಡುವೆಯೂ ಜಿಲ್ಲಾಡಳಿತದಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ರೇ ಚಾರ್ಮಾಡಿ ಘಾಟಿ ರಸ್ತೆಯಲ್ಲೇ ಕೆಲ ಪುಂಡರು ಮೋಜು-ಮಸ್ತಿ ಮಾಡುತ್ತಾ ಡಾನ್ಸ್ ಮಾಡಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಹೈರಾಣಾಗಿರುವಂತ ಘಟನೆ ಇಂದು ನಡೆದಿದೆ.

ಚಾರ್ಮಾಡಿ ಘಾಟ್ ರಸ್ತೆಯ ಜಲಪಾತಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು, ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯೆಯೇ
ಕೆಲ ಪುಂಡ ಯುವಕರು ಅಂಗಿ ಬಿಚ್ಚಿ ಜೋರಾಗಿ ಹಾಡು ಹಾಕುತ್ತಾ ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಈ ಹುಚ್ಚಾಟದಿಂದ ಇತರೆ ಪ್ರವಾಸಿಗರೂ ಕಿರಿಕಿರಿ ಅನುಭವಿಸುವಂತಾಯಿತು.

ಈ ಮದ್ಯೆ ಕೆಲ ಪ್ರವಾಸಿಗರು ಅಪಾಯಕಾರಿ ಬಂಡೆಗಳ ಮೇಲೆ ಹತ್ತಿ ಸೆಲ್ಫಿ ಕ್ಲಿಕಿಸುವಲ್ಲಿ ನಿರತರಾಗಿದ್ದರು. ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಚಿಕ್ಕಮಗಳೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಪ್ರವಾಸಿಗರು, ಪ್ರಯಾಣಿಕರಿಗೆ ಏನಾದ್ರೂ ತೊಂದರೆ ಉಂಟಾದಲ್ಲಿ 112ಗೆ ಕರೆ ಮಾಡಿ, ದೂರು ಸಲ್ಲಿಸುವಂತೆ ತಿಳಿಸಿದ್ದಾರೆ.

- Advertisement -

Latest News

error: Content is protected !!