Thursday, June 4, 2026
Homeತಾಜಾ ಸುದ್ದಿಪರಪುರುಷನ ಜೊತೆ ಸರಸ ಸಲ್ಲಾಪ! ಮಂಚದಲ್ಲಿರುವಾಗಲೇ ಗಂಡನ ಕೈಗೆ ಸಿಕ್ಕಿಬಿದ್ದ ಜೋಡಿ..

ಪರಪುರುಷನ ಜೊತೆ ಸರಸ ಸಲ್ಲಾಪ! ಮಂಚದಲ್ಲಿರುವಾಗಲೇ ಗಂಡನ ಕೈಗೆ ಸಿಕ್ಕಿಬಿದ್ದ ಜೋಡಿ..

- Advertisement -
- Advertisement -

ಚಾಮರಾಜನಗರ: ಅನೈತಿಕ ಸಂಬಂಧದ ಆರೋಪದಲ್ಲಿ ಯುವಕನೋರ್ವನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನ ಬೀಡು ಗ್ರಾಮದಲ್ಲಿ ನಡೆದಿದೆ. ಮೃತನನ್ನು ಭೀಮನಬೀಡು ಗ್ರಾಮದ ಬಸವಶೆಟ್ಟಿ (37) ಎಂದು ಗುರುತಿಸಲಾಗಿದೆ.

ಶಿವಣ್ಣನ ಪತ್ನಿ ಸೌಭಾಗ್ಯ ಜತೆ ಬಸವಶೆಟ್ಟಿಗೆ ಅಕ್ರಮ ಸಂಬಂಧ ಇತ್ತು. ಸೌಭಾಗ್ಯಗೆ ಬಸವಶೆಟ್ಟಿ ಚುಂಬಿಸಿರುವ ಪೋಟೋವನ್ನೂ ನೋಡಿದ ಶಿವಣ್ಣ ಕೆಂಡಾಮಂಡಲವಾಗಿದ್ದ. ಅದೇ ಕೋಪದಲ್ಲಿ ಮನೆಗೆ ಬಂದ ಶಿವಣ್ಣನಿಗೆ ಕಂಡದ್ದು ತನ್ನ ಪತ್ನಿ ಪರಪುರಷನೊಂದಿಗೆ ಸಲ್ಲಾಪದಲ್ಲಿ ಮುಳುಗಿದ್ದ ದೃಶ್ಯ.

ಸಿಟ್ಟಿಗೆದ್ದ ಶಿವಣ್ಣ ತನ್ನ ಪತ್ನಿಯ ಪ್ರಿಯಕರ ಬಸವಶೆಟ್ಟಿಯನ್ನ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದ ಬಸವಶೆಟ್ಟಿ(26)ಯನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕುಳಿಯಲಿಲ್ಲ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶಿವಣ್ಣ‌ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!