Saturday, June 1, 2024
Homeಕರಾವಳಿಗ್ರಾ.ಪಂ ಸದಸ್ಯೆ ಯಮುನಾರಿಂದ ಹದಗೆಟ್ಟ ರಸ್ತೆಯ ದುರಸ್ಥಿ ಕಾರ್ಯ: ಗ್ರಾಮಸ್ಥರಿಂದ ಪ್ರಶಂಸೆ..

ಗ್ರಾ.ಪಂ ಸದಸ್ಯೆ ಯಮುನಾರಿಂದ ಹದಗೆಟ್ಟ ರಸ್ತೆಯ ದುರಸ್ಥಿ ಕಾರ್ಯ: ಗ್ರಾಮಸ್ಥರಿಂದ ಪ್ರಶಂಸೆ..

spot_img
- Advertisement -
- Advertisement -

ತೆಕ್ಕಾರು: ಇಲ್ಲಿನ ಕನರಾಜೆ -ಕಾಪಿಗುಡ್ಡೆಯ ಕೆಸರುಮಯಗೊಂಡ ಸಂಚರಿಸಲು ಯೋಗ್ಯವಲ್ಲದ ರಸ್ತೆಯನ್ನು ದುರಸ್ಥಿಗೊಳಿಸುವ ಕಾರ್ಯವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ಯಮುನಾ ಅವರ ಮುತುವರ್ಜಿಯಿಂದ ನಡೆಯಿತು.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಈ ಭಾಗದ ಜನರ ಓಡಾಟಕ್ಕೆ ತೊಂದರೆಯಾಗುತ್ತಿತ್ತು, ಇದನ್ನು ಮನಗಂಡ ಇಲ್ಲಿನ ಗ್ರಾ.ಪಂ. ಸದಸ್ಯೆ ಯಮುನಾ ಅವರು ತಕ್ಷಣಕ್ಕೆ ಸ್ಪಂದಿಸಿ ರಸ್ತೆಯನ್ನು ದುರಸ್ಥಿಗೊಳಿಸುವ ಕಾರ್ಯವನ್ನು ಮಾಡಿರುವುದರಿಂದ ಸ್ಥಳೀಯರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ತೆಕ್ಕಾರು ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಝಾಕ್, ಗ್ರಾ.ಪಂ‌. ಸದಸ್ಯ ಅನ್ವರ್ ನೆಲ್ಲಿಪಳಿಕೆ ಹಾಜರಿದ್ದರು.

- Advertisement -
spot_img

Latest News

error: Content is protected !!