Monday, June 8, 2026
Homeಕರಾವಳಿಮಂಗಳೂರು: ಫ್ಲೈ ಓವರ್ ನಲ್ಲಿ ಭೀಕರ ಅಪಘಾತ, ಮೇಲ್ಸೇತುವೆಯಿಂದ ಮಹಿಳೆ ಎಸೆಯಲ್ಪಟ್ಟು ಸಾವು !

ಮಂಗಳೂರು: ಫ್ಲೈ ಓವರ್ ನಲ್ಲಿ ಭೀಕರ ಅಪಘಾತ, ಮೇಲ್ಸೇತುವೆಯಿಂದ ಮಹಿಳೆ ಎಸೆಯಲ್ಪಟ್ಟು ಸಾವು !

- Advertisement -
- Advertisement -

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‍ ನಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ನಿಂದ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ತಾಯಿ ಫ್ಲೈಓವರಿನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಕುಂಪಲ ಆಶ್ರಯ ಕಾಲೋನಿ ನಿವಾಸಿ ವಸಂತಿ ನಾಯರ್ (50) ಮೃತ ಮಹಿಳೆ. ಪುತ್ರಿ ಶ್ರೀಜಾ (20) ಎಂಬವರನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಪಲ ಕಡೆಯಿಂದ ತನ್ನ ತಾಯಿಯನ್ನು ನೋಡಲು ವಸಂತಿ ನಾಯರ್ ಅವರು ಕಲ್ಲಾಪುವಿನತ್ತ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ, ಮಂಗಳೂರಿನಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು ಡಿವೈಡರ್ ಹಾರಿ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಸವಾರೆಯಾಗಿದ್ದ ವಸಂತಿ ಫ್ಲೈಓವರಿನಿಂದ ಸುಮಾರು 20 ಅಡಿಯಷ್ಟು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವಸಂತಿಯವರ ಪತಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತ ವಸಂತಿ ಓರ್ವ ಪುತ್ರಿ ಮತ್ತು ಪುತ್ರನನ್ನು ಆಗಲಿದ್ದಾರೆ.

- Advertisement -

Latest News

error: Content is protected !!