Thursday, May 9, 2024
Homeತಾಜಾ ಸುದ್ದಿಬಿಗ್ ಬಾಸ್ ಫಿನಾಲೆ ಮುಗಿಯುತ್ತಿದ್ದಂತೆ ಸಿಡಿಯುತ್ತಾ ದೊಡ್ಡ ಬಾಂಬ್ ? : ಚಂದ್ರಚೂಡ್ ಅವರಿಗೆ...

ಬಿಗ್ ಬಾಸ್ ಫಿನಾಲೆ ಮುಗಿಯುತ್ತಿದ್ದಂತೆ ಸಿಡಿಯುತ್ತಾ ದೊಡ್ಡ ಬಾಂಬ್ ? : ಚಂದ್ರಚೂಡ್ ಅವರಿಗೆ ಗೊತ್ತಿರುವ ಆ ಮಾಹಿತಿ ಏನು

spot_img
- Advertisement -
- Advertisement -

ಬೆಂಗಳೂರು : ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮುಗಿಯೋದಕ್ಕೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಬಗ್ಗೆ ಕೂಡ ಸಾಕಷ್ಟು ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಿಂದ ಯಾವುದೇ ಸ್ಪರ್ಧಿ ಎಲಿಮಿನೇಟ್ ಆಗಿ ಹೊರಗೆ ಬಂದಾಗ ಅವರು ಯಾವುದೇ ಪತ್ರಿಕೆ, ಟಿವಿ ವಾಹಿನಿಗಳಿಗೆ ಸಂದರ್ಶನ ನೀಡೋದು ಸಾಮಾನ್ಯ. ಕಳೆದ ಎಲ್ಲಾ ಸೀಸನ್ ಗಳಲ್ಲೂ ಇದು ನಡೆದುಕೊಂಡು ಬಂದಿದ್ದೇ. ಆದರೆ ಈ ಸೀಸಸ್ ನಲ್ಲಿ ಮಾತ್ರ ಈ ಒಂದು ವಿಚಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ನಿಮಗೆಲ್ಲಾ ಗೊತ್ತೇ ಇದೆ. ಬಿಗ್ ಬಾಸ್ ಈ  ಹಿಂದಿನ ಎಲ್ಲಾ ಸೀಸನ್ ಗಿಂತ ಈ ಸೀಸನ್ ತುಂಬಾನೇ ಸ್ಪೆಷಲ್ ಅಂತಾ. ಒಂದು ಬಾರಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದರಿಂದ ಸಾಕಷ್ಟು ಇಂಟರೆಸ್ಟಿಂಗ್ ಆಗಿದೆ. ಇದೆಲ್ಲದರ ನಡುವೆ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಸಾಕಷ್ಟು ಚರ್ಚೆ ಹಾಗೇ ವಿವಾದಕ್ಕೆ ಕಾರಣ ಸ್ಪರ್ಧಿ ಅಂದ್ರೆ ಅದು ಚಕ್ರವರ್ತಿ ಚಂದ್ರಚೂಡ ಅವರು.

ಬಿಗ್ ಬಾಸ್ ಮನೆಯಲ್ಲಿ ಮಿಡಲ್ ಫಿಂಗರ್ ತೋರಿಸಿ ಚಕ್ರವರ್ತಿ ಅವರು ಎಷ್ಟರ ಮಟ್ಟಿಗೆ ಕೆಂಗಣ್ಣಿಗೆ ಗುರಿಯಾದ್ರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಚಕ್ರವರ್ತಿ ಅವರ ನಡೆಗೆ ಸುದೀಪ್ ಅವರು ಕೂಡ ಆಕ್ರೋಶ ಹೊರ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೂ ಕೂಡ ಕಾರಣವಾಯಿತು. ಹೀಗಿರುವಾಗಲೇ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಮನೆಯಿಂದಲೇ ಕೊನೆಗೆ ಕನ್ನಡಿಗರ ಕ್ಷಮೆ ಕೇಳಿದ್ರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಚಂದ್ರಚೂಡ್ ಅವರು ಒಂದೊಂದೇ ಬಾಂಬ್ ಗಳನ್ನು ಸಿಡಿಸುತ್ತಿದ್ದು ಮುಂದೇನಾಗುತ್ತೆ ಅನ್ನೋ ಕುತೂಹಲ ಮೂಡಿಸಿದೆ.

- Advertisement -
spot_img

Latest News

error: Content is protected !!