Wednesday, June 24, 2026
Homeಕರಾವಳಿರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧೆಯ ಸರ ಕಳ್ಳತನ; ಆರೋಪಿಯನ್ನ ಬಂಧಿಸಿದ ಪೊಲೀಸರು

ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧೆಯ ಸರ ಕಳ್ಳತನ; ಆರೋಪಿಯನ್ನ ಬಂಧಿಸಿದ ಪೊಲೀಸರು

- Advertisement -
- Advertisement -

ನೆಲ್ಯಾಡಿ: ಗ್ರಾಮದ ಪಡುಬೆಟ್ಟು ರಸ್ತೆ ಬದಿ ನಿಂತಿದ್ದ ಮಹಿಳೆಯೋರ್ವಳ ಕುತಿಗೆಯಿಂದ 10 ಪವನ್‌ ತೂಕದ ಸರವನ್ನು ಕಳ್ಳನೊಬ್ಬ ಕದ್ದೊಯ್ದ ಘಟನೆ ನಡೆದಿದೆ.

ಆರೋಪಿಯನ್ನ ಸುಳ್ಯದ ಅಲೆಟ್ಟಿ ನಿವಾಸಿ ಅಬ್ದುಲ್‌ ರಹಿಮಾನ್‌ (31) ಎನ್ನಲಾಗಿದೆ. ಇದೀಗ ಈತನನ್ನು ಉಪ್ಪಿನಂಗಡಿ ಪೊಲೀಸರು ನೆಕ್ಕಿಲಾಡಿಯಲ್ಲಿ ಬಂಧಿಸಿ ಚಿನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಗ್ರಾಮದ ಪಡುಬೆಟ್ಟು ರಸ್ತೆ ಬದಿ ನಿಂತಿದ್ದ ಅಲಿಮಮ್ಮ (65) ಎಂಬವರ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವೃದ್ಧೆಯನ್ನು ಮಾತನಾಡಿಸಿ ಬಳಿಕ ಕುತ್ತಿಗೆಯಲ್ಲಿದ್ದ 10 ಪವನ್‌ ತೂಕದ ಸರವನ್ನು ಎಳೆದೊಯ್ದಿದ್ದಾರೆ. ಈ ಕುರಿತಂತೆ ದೂರನ್ನ ಕೂಡ ನೀಡಲಾಗಿತ್ತು.

ಪ್ರಕರಣದ ಬಗ್ಗೆ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಅವರ ತಂಡ ಕಾರ್ಯಾಚರಣೆ ನಡೆಸಿದ್ದು, ದರೋಡೆಗೆ ಬಳಸಿದ ಬೈಕ್‌ ಮತ್ತು ಅಂದಾಜು 4.54 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್‌ ಕೂಡ ಮೈಸೂರು ನಗರದ ವಿಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ ಕದಿಯಲ್ಪಟ್ಟದ್ದು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!