Wednesday, June 3, 2026
Homeಕರಾವಳಿಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಉಳ್ಳಾಲದಲ್ಲಿ ಸರ ಕದ್ದವನು ಮೂರೇ ಗಂಟೆಗಳಲ್ಲಿ ಅಂದರ್

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಉಳ್ಳಾಲದಲ್ಲಿ ಸರ ಕದ್ದವನು ಮೂರೇ ಗಂಟೆಗಳಲ್ಲಿ ಅಂದರ್

- Advertisement -
- Advertisement -

ಉಳ್ಳಾಲ: ಕೋಣಾಜೆ ಹಾಗೂ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಮೂರೇ ಗಂಟೆಗಳಲ್ಲಿ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯೊಬ್ಬಳ ಸರ ಕದ್ದು ಎಸ್ಕೇಪ್ ಆಗುತ್ತಿದ್ದ ಕೇರಳ ಮೂಲದ ಸುಲ್ತಾನ್ (28) ಎಂಬಾತನನ್ನು ಉಳ್ಳಾಲ ಹಾಗೂ ಕೋಣಾಜೆ ಪೊಲೀಸರ ತಂಡ ಹಿಡಿಯುವಲ್ಲಿ ಯಶಸ್ವಿಯಾಗಿದೆ. ದೇರಳಕಟ್ಟೆಯ ಬಾರ್ ವೊಂದರಲ್ಲಿ ಇದ್ದ ಆರೋಪಿ ಸುಲ್ತಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಕೆಲಸ ಮುಗಿಸಿ  ಮನೆಗೆ ತೆರಳುತ್ತಿದ್ದ ನಿಶಾ ಎಂಬ ಯುವತಿಯ ಕುತ್ತಿಗೆಯಿಂದ ಒಂದು ಪವನ್ ನ ಚಿನ್ನದ ಸರವನ್ನು ಬುಲೆಟ್ ಬೈಕನಲ್ಲಿ ಬಂದಿದ್ದ ಆರೋಪಿ ಸುಲ್ತಾನ್ ಕಿತ್ತು ಪರಾರಿಯಾಗಿದ್ದ. ಈ ದೃಶ್ಯ ಪಕ್ಕದಲ್ಲೇ ಇದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಸಿಸಿ ಟಿವಿಯಲ್ಲಿ ಸಿಕ್ಕ ದೃಶ್ಯಗಳನ್ನು ಆಧರಿಸಿ ಪೊಲೀಸರು ಎಲ್ಲಾ ಕಡೆ ಪರಿಶೀಲನೆ ನಡೆಸಿದ್ದಾರೆ. ಆಗ ಆತ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದಾನೆ ಅನ್ನೋದು ಗೊತ್ತಾಗಿದೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇನ್ನು ಈ ಕಾರ್ಯಾಚರಣೆಯಲ್ಲಿ ಎಸಿಪಿ ರಂಜಿತ್ ನೇತೃತ್ವದಲ್ಲಿ ಉಳ್ಳಾಲ ಠಾಣಾಧಿಕಾರಿ ಸಂದೀಪ್,ಪಿ ಎಸ್ ಐ ಗಳಾದ ಶಿವಕುಮಾರ್, ಪ್ರದೀಪ್ ಹಾಗೂ ಕ್ರೈಂ ತಂಡ ಮತ್ತು ಕೊಣಾಜೆ ಠಾಣೆಯ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ಕ್ರೈಂ ತಂಡ ಭಾಗವಹಿಸಿತ್ತು.

- Advertisement -

Latest News

error: Content is protected !!