Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; 2012 ರಲ್ಲಿ ಮಹಿಳೆಯ ಕತ್ತಿನಿಂದ ಸರ ಕದ್ದಿದ್ದ ಆರೋಪಿಯ ಸೆರೆ

ಉಪ್ಪಿನಂಗಡಿ; 2012 ರಲ್ಲಿ ಮಹಿಳೆಯ ಕತ್ತಿನಿಂದ ಸರ ಕದ್ದಿದ್ದ ಆರೋಪಿಯ ಸೆರೆ

- Advertisement -
- Advertisement -

ಉಪ್ಪಿನಂಗಡಿ; 2012 ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಮಹಿಳೆಯ ಕತ್ತಿನಿಂದ ಸರ ಕದ್ದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಶಾಫಿ ಬಂಧಿತ ಆರೋಪಿ. ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಸುರತ್ಕಲ್ ನ ಬೊಕ್ಕಬೆಟ್ಟು ಗ್ರಾಮದ ಕೃಷ್ಣಾಪುರ 8ನೇ ಬ್ಲಾಕ್ ನಿವಾಸಿ ಮಹಮ್ಮದ್ ಶಾಫಿ 12 ವರ್ಷಗಳ ಹಿಂದೆ ಗೋಳಿತೊಟ್ಟು ಎಂಬಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕದ್ದು ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು.ಆದರೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆತನ ಬಗ್ಗೆ ಸುಳಿವು ಸಿಕ್ಕಿದ ಹಿನ್ನೆಲೆ ಗುರುವಾರ ಉಡುಪಿ ಜಿಲ್ಲೆಯ ಅಂಪಾರ್ ಎಂಬಲ್ಲಿ ಬಂಧಿಸಿದ್ದಾರೆ.ಈತನ ವಿರುದ್ಧ ಬಂಟ್ವಾಳ, ವಿಟ್ಲ, ಉಪ್ಪಿನಂಗಡಿ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಖಲಾಗಿದೆ.

- Advertisement -

Latest News

error: Content is protected !!