Thursday, June 4, 2026
Homeಕರಾವಳಿಮಂಗಳೂರುಕಡಬ; ಮದ್ಯದ ಅಮಲಿನಲ್ಲಿ ಆಟೋದಲ್ಲಿ ಯುವತಿಗೆ ಕಿರುಕುಳ ನೀಡಿದ ಕುಡುಕ

ಕಡಬ; ಮದ್ಯದ ಅಮಲಿನಲ್ಲಿ ಆಟೋದಲ್ಲಿ ಯುವತಿಗೆ ಕಿರುಕುಳ ನೀಡಿದ ಕುಡುಕ

- Advertisement -
- Advertisement -

ಕಡಬ; ಮದ್ಯದ ಅಮಲಿನಲ್ಲಿ ಕುಡುಕನೊಬ್ಬ ಆಟೋದಲ್ಲಿ ಯುವತಿಗೆ ಕಿರುಕುಳ ನೀಡಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬದಿಂದ ಕೋಡಿಂಬಾಳಕ್ಕೆ ಹೋಗುವ ಆಟೋವೊಂದರಲ್ಲಿ ಮಹಿಳಾ ಪ್ರಯಾಣಿಕರಿದ್ದರು. ಇದೇ ಆಟೋದಲ್ಲಿ ಕುಡುಕನೊಬ್ಬನಿದ್ದ. ಆತ ಆಟೋದಲ್ಲಿದ್ದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ್ದಾನೆ.ಆಟೋದಲ್ಲಿದ್ದ ಮಹಿಳೆ ವಿಚಾರವನ್ನು ಚಾಲಕನ ಗಮನಕ್ಕೆ ತಂದಿದ್ದಾರೆ. ಆಗ ಯುವತಿಯೂ ಕಿರುಕುಳ ನೀಡಿದ್ದನ್ನು ತಿಳಿಸಿದ್ದಾಳೆ. ಕೂಡಲೇ ಆಟೋ ಚಾಲಕ ಕುಡುಕನನ್ನು ಕಲ್ಲಂತಡ್ಕ ಎಂಬಲ್ಲಿ ಇಳಿಸಿ ಹೋಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

- Advertisement -

Latest News

error: Content is protected !!