Thursday, June 4, 2026
Homeಉತ್ತರ ಕನ್ನಡಭಟ್ಕಳ;ಮೀನು ಕೊಳ್ಳುವ ನೆಪದಲ್ಲಿ ಬಂದು ಮಹಿಳೆಯ ಸರ ಎಗರಿಸಿದ ಕಳ್ಳರು

ಭಟ್ಕಳ;ಮೀನು ಕೊಳ್ಳುವ ನೆಪದಲ್ಲಿ ಬಂದು ಮಹಿಳೆಯ ಸರ ಎಗರಿಸಿದ ಕಳ್ಳರು

- Advertisement -
- Advertisement -

ಭಟ್ಕಳ: ಮೀನು ಮಾರುತ್ತಿದ್ದ ಮಹಿಳೆಯ ಬಳಿ ಮೀನು ಕೊಳ್ಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಚಿನ್ನದ ಸರ ಎಗರಿಸಿದ ಘಟನೆ ಶಿರಾಲಿಯ ಸೋನಾರಾಕೇರಿ ಕ್ರಾಸ್ ಸಮೀಪ ನಡೆದಿದೆ. ನಾಗಮ್ಮ ಮಹಾದೇವ ಮೊಗೇರ ಎಂಬ ಮಹಿಳೆಯ ಸರವನ್ನು ಕಳ್ಳತನ ಮಾಡಲಾಗಿದೆ.

ನಾಗಮ್ಮ ಅವರು  ಎಂದಿನಂತೆ ಶಿರಾಲಿಯ ಅಕ್ಕ ಪಕ್ಕದ ಗ್ರಾಮದ ಮನೆ ಮನೆಗಳಿಗೆ ಮೀನು ವ್ಯಾಪಾರ ಮಾಡಿಕೊಂಡು ಸೋನಾರಕೇರಿ ಕ್ರಾಸ್‌ ನಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುತ್ತಿದ್ದಾಗ ಮುಂದಿನಿಂದ ಬಂದ ಇಬ್ಬರು ಏನು ಮೀನು ಇದೆ ಎಂದು ವಿಚಾರಿಸಿದ್ದಾರೆ. ಆಗ ನಾಗಮ್ಮ ಬಂಗಡೆ ಮೀನು ಎಂದು ಹೇಳಿದ್ದಾರೆ. ಈ ವೇಳೆ ಹಿಂಭಾಗದಲ್ಲಿ ಕುಳಿತಿದ್ದ ಕಪ್ಪು ಬಣ್ಣದ ಚಹರೆಯುಳ್ಳ ವ್ಯಕ್ತಿ ಮಹಿಳೆಯ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು 27 ಗ್ರಾಂ ತೂಕದ ಬಂಗಾರದ ಚೈನ್ ಕಿತ್ತುಕೊಂಡು ನಾಪತ್ತೆಯಾಗಿದ್ದಾರೆ. ಕಳ್ಳರು ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ.ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!