Thursday, July 18, 2024
Homeಮನರಂಜನೆಚಿತ್ರರಂಗದಲ್ಲಿ 15 ವಸಂತ ಪೂರೈಸಿದ 'ಬಾಹುಬಲಿ' ಬೆಡಗಿ

ಚಿತ್ರರಂಗದಲ್ಲಿ 15 ವಸಂತ ಪೂರೈಸಿದ ‘ಬಾಹುಬಲಿ’ ಬೆಡಗಿ

spot_img
- Advertisement -
- Advertisement -

ಮುದ್ದು ಮುದ್ದಾದ ಚೆಲುವೆ ಅನುಷ್ಕಾ ಶೆಟ್ಟಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಯಾವುದೇ ಪಾತ್ರಕ್ಕಾದರೂ ಜೀವ ತುಂಬುವ ಈ ನಟಿ ಅನೇಕರ ಹೃದಯ ಗೆದ್ದಿದ್ದಾರೆ.

ಬಾಹುಬಲಿ ಸಿನಿಮಾ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ ಈ ನಟಿ ಚಿತ್ರರಂಗದಲ್ಲಿ 15 ವಸಂತ ಪೂರೈಸಿದ್ದಾರೆ‌.

ಹೌದು, ಅನುಷ್ಕಾ ಶೆಟ್ಟಿ 2005 ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ 15 ವರ್ಷದ ಸಿನಿ ಪಯಣವನ್ನು ಅಭಿಮಾನಿ ಬಳಗದೊಂದಿಗೆ ಆಚರಣೆ ಮಾಡಿದ್ದಾರೆ.

ಈ ವೇಳೆ ಇವರಿಗೆ ಅಭಿಮಾನಿಗಳು ಸನ್ಮಾನ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನುಷ್ಕಾ ತಮ್ಮ ಸಿನಿ ಪಯಣದ ಬಗ್ಗೆ ಹಾಗೂ ಅಭಿಮಾನಿಗಳು ತೋರಿಸಿದ ಪ್ರೀತಿ ಬಗ್ಗೆ ಹೇಳಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ, ಪುರಿ ಜಗನ್ನಾಥ್, ಸುರೇಶ್ ಬಾಬು, ನಟಿ ಚಾರ್ಮಿ ಕೌರ್ ಸೇರಿದಂತೆ ಸಾಕಷ್ಟು ಗಣ್ಯರು, ಅಭಿಮಾನಿಗಳು ಭಾಗಿಯಾಗಿದ್ದರು. ಅನುಷ್ಕಾರ ಸಿನಿ ಜರ್ನಿಗೆ ಶುಭಕೋರಿದರು.

- Advertisement -
spot_img

Latest News

error: Content is protected !!