ವಿಶ್ವದಾದ್ಯಂತ ಕರೋನಾ ವೈರಸ್ ಭೀತಿ ಹೆಚ್ಚಾಗ್ತಿದ್ದಂತೆ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬೆಲೆ ಹೆಚ್ಚಾಗಿದೆ. ಅನೇಕ ಕಡೆ ಮಾಸ್ಕ್ ಸಿಗ್ತಿಲ್ಲ. ಕಡಿಮೆ ಬೆಲೆ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಆದ್ರೆ ಅಂಗಡಿ ಮಾಲೀಕನೊಬ್ಬ ಕೇವಲ 2 ರೂಪಾಯಿಗೆ ಮಾಸ್ಕ್ ಮಾರಾಟ ಮಾಡ್ತಿದ್ದಾನೆ.
ಕೇರಳದ ಔಷಧಿ ಅಂಗಡಿಯಲ್ಲಿ ಮಾಸ್ಕನ್ನು ಮೂಲ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಅಂಗಡಿ ಎರಡು ದಿನಗಳಲ್ಲಿ 5000 ಮಾಸ್ಕ್ ಗಳನ್ನು ಮಾರಾಟ ಮಾಡಿದೆ. ಕೇವಲ ಎರಡು ರೂಪಾಯಿಗೆ ಮಾಸ್ಕ್ ಮಾರಾಟ ಮಾಡಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಔಷಧಿ ಅಂಗಡಿ ಮಾಲೀಕ ನದೀಮ್, ವಿಶೇಷವಾಗಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡ್ತಿದ್ದಾರೆ.
ಕರೋನಾ ಬಂದ ನಂತ್ರವಲ್ಲ, ಕಳೆದ 8 ವರ್ಷಗಳಿಂದ ಮಾಸ್ಕನ್ನು 2 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ ಎಂದಿದ್ದಾರೆ. ಈಗ ಎಲ್ಲೆಡೆ ಬೆಲೆಗಳು ಹೆಚ್ಚಾಗಿದೆ. ನಮಗೇ ಮಾಸ್ಕ್ 8-10 ರೂಪಾಯಿಗೆ ಸಿಗ್ತಿದೆ. ಆದ್ರೂ ನಾವು 2 ರೂಪಾಯಿಗೆ ಮಾಸ್ಕ್ ನೀಡ್ತಿದ್ದೇವೆಂದು ಅವ್ರು ಹೇಳಿದ್ದಾರೆ.
