Sunday, June 7, 2026
Homeಕರಾವಳಿವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಮಂಗಳೂರು ಮೂಲದ ನಟಿ ಮಾನ್ವಿತಾ ಕಾಮತ್

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಮಂಗಳೂರು ಮೂಲದ ನಟಿ ಮಾನ್ವಿತಾ ಕಾಮತ್

- Advertisement -
- Advertisement -

ಬೆಂಗಳೂರು: ಮಂಗಳೂರು ಮೂಲದ ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.ಈ ವಿಚಾರವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜೊತೆಯಲ್ಲಿ ಜೊತೆ ಜೊತೆಯಲ್ಲಿ ಹಾಡಿನೊಂದಿಗೆ ಬಹಳ ಕ್ರಿಯೇಟಿವ್‌ ಆಗಿ ತಮ್ಮ ಮದುವೆ ಆಮಂತ್ರಣವನ್ನು ಅಭಿಮಾನಿಗಳೊಂದಿಗೆ ಮಾನ್ವಿತಾ ಹಂಚಿಕೊಂಡಿದ್ದಾರೆ.ದುನಿಯಾ ವಿಜಯ್ ನಟನೆಯ ‘ಕನಕ’, ‘ಚೌಕ’, ‘ತಾರಕಾಸುರ’, ‘ರಿಲ್ಯಾಕ್ಸ್ ಸತ್ಯ’, ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್’, ‘ಶಿವ 143’ ಮುಂತಾದ ಸಿನಿಮಾಗಳಲ್ಲಿ ಮಾನ್ವಿತಾ ನಟಿಸಿದ್ದಾರೆ. ಸದ್ಯ ಅವರ ‘ಅಪ್ಪಾ ಐ ಲವ್ ಯೂ’ ಸಿನಿಮಾ ತೆರೆಕಂಡಿದ್ದು, ಕೈಯಲ್ಲಿ ಇನ್ನೂ ‘ಹ್ಯಾಪಿಲಿ ಮ್ಯಾರೀಡ್’ , ‘ಬ್ಯಾಡ್’, ‘ರಾಜಸ್ಥಾನ್ ಡೈರೀಸ್’, ಸಿನಿಮಾಗಳು ಬಿಡುಗಡೆಯಾಗಬೇಕಿದೆ.ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಮಾನ್ವಿತಾ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

- Advertisement -

Latest News

error: Content is protected !!