Wednesday, June 24, 2026
Homeಕರಾವಳಿಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಸರ್ಕಾರ, ಸಿಸಿಬಿ ಇನ್ಸೆಪೆಕ್ಟರ್ ಶಿವಪ್ರಕಾಶ್ ವರ್ಗಾವಣೆಗೆ ತಡೆ

ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಸರ್ಕಾರ, ಸಿಸಿಬಿ ಇನ್ಸೆಪೆಕ್ಟರ್ ಶಿವಪ್ರಕಾಶ್ ವರ್ಗಾವಣೆಗೆ ತಡೆ

- Advertisement -
- Advertisement -

ಮಂಗಳೂರು : ನಿನ್ನೆಯಷ್ಟೇ ಮಹಾಎಕ್ಸೆಪ್ರೆಸ್ ನಲ್ಲಿ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ವರ್ಗಾವಣೆ ಬಗ್ಗೆ ವರದಿ ಮಾಡಿದ್ದೆವು. ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದೇ ಇನ್ಸ್ ಪೆಕ್ಟರ್ ವರ್ಗಾವಣೆಗೆ ಕಾರಣ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದೆವು. ಬಹುತೇಕ ಮಾಧ್ಯಮಗಳು ಇದೇ ರೀತಿ ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಇದೀಗ ಸರ್ಕಾರ ಎಚ್ಚೆತ್ತುಕೊಂಡಿದೆ.ನಿರೂಪಕಿ ಅನುಶ್ರೀ ಅವರನ್ನ ವಿಚಾರಣೆ ಮಾಡಿದ ಸಿಸಿಬಿ ಪಿಐ ಶಿವಪ್ರಕಾಶ್ ಅವ್ರ ವರ್ಗಾವಣೆಯನ್ನ ತಡೆ ಹಿಡಿದಿದೆ.

ರಾಜಕೀಯ ಒತ್ತಡದ ಹಿನ್ನೆಲೆ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಜಾಗಕ್ಕೆ ಮಹೇಶ್ ಪ್ರಸಾದ್ ಅವ್ರನ್ನ ವರ್ಗಾವಣೆ ಮಾಡಲಾಗಿತ್ತು ಮತ್ತು ಶಿವಪ್ರಕಾಶ್ ಅವ್ರನ್ನ ಲೋಕಯುಕ್ತಕ್ಕೆ ವರ್ಗಾವಣೆ ಮಾಡಿತ್ತು. ಸಧ್ಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚತ್ತುಕೊಂಡ ಸರ್ಕಾರ ಮತ್ತು ಪೊಲೀಸ್ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಸಿಸಿಬಿ ಪಿಐ ಶಿವಪ್ರಕಾಶ್ ವರ್ಗಾವಣೆಗೆ ತಡೆ ಹಿಡಿದಿದೆ ಮತ್ತು ಅವ್ರು ಸಿಸಿಬಿಯಲ್ಲಿಯೇ ಮುಂದುವರೆಯುವುದಾಗಿ ಆಯುಕ್ತ ವಿಕಾಸ್ ತಿಳಿಸಿದ್ದಾರೆ.

- Advertisement -

Latest News

error: Content is protected !!