Thursday, June 4, 2026
Homeಕರಾವಳಿಉಪ್ಪಿನಂಗಡಿ; ಅಡಿಕೆ ಅಂಗಡಿಯಿಂದ ಒಂದು ಲಕ್ಷ ರೂಪಾಯಿ ಕಳವು

ಉಪ್ಪಿನಂಗಡಿ; ಅಡಿಕೆ ಅಂಗಡಿಯಿಂದ ಒಂದು ಲಕ್ಷ ರೂಪಾಯಿ ಕಳವು

- Advertisement -
- Advertisement -

ಉಪ್ಪಿನಂಗಡಿ; ಅಡಿಕೆ ಅಂಗಡಿಯಿಂದ ಒಂದು ಲಕ್ಷ ರೂಪಾಯಿ ಕಳವು ಮಾಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

 ಅಡಿಕೆ ವ್ಯಾಪಾರಿ ಮಧ್ಯಾಹ್ನ ಊಟಕ್ಕೆಂದು ಹೋಗುವ ವೇಳೆ ಕ್ಯಾಶ್ ಡ್ರಾವರ್ ಗೆ ಬೀಗ ಹಾಕಿ , ಅಂಗಡಿಯ ಶಟರ್ ನ್ನು ಅರ್ಧ ಎಳೆದು ಹೋಗಿದ್ದರು. ಊಟ ಮುಗಿಸಿ ವಾಪಾಸು ಬರುವ ವೇಳೆಗೆ ಅಂಗಡಿಯೊಳಗಿನ ಕ್ಯಾಶ್ ಡ್ರಾವರ್ ತೆರೆಯಲ್ಪಟ್ಟಿದ್ದು, ಯಾರೋ ಕಳ್ಳರು ಅಂಗಡಿಯೊಳಗೆ ನುಗ್ಗಿ ಕ್ಯಾಶ್ ಡ್ರಾವರ್ ಬೀಗ ಮುರಿದು ಅದರೊಳಗಿದ್ದ ಒಂದು ಲಕ್ಷ ರೂಪಾಯಿ ನಗದನ್ನು ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ.

ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಂಗಡಿಯೊಳಗೆ ನುಗ್ಗಿರುವ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!