Tuesday, February 27, 2024
Homeಇತರಸವಣಾಲಿನಲ್ಲಿ ಮಕ್ಕಳ ಕುಣಿತ ಭಜನಾ ತಂಡ ಉದ್ಘಾಟನೆ

ಸವಣಾಲಿನಲ್ಲಿ ಮಕ್ಕಳ ಕುಣಿತ ಭಜನಾ ತಂಡ ಉದ್ಘಾಟನೆ

spot_img
spot_img
- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ನಡೆಯುವ ಮಕ್ಕಳ ಕುಣಿತ ಭಜನಾ ತರಬೇತಿಯನ್ನು ದಿನಾಂಕ 12 – 11 – 2023 ಅದಿತ್ಯವಾರಂದು ರಾಧಾಕೃಷ್ಣ ಸಭಾಭವನದಲ್ಲಿ ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀಯುತ ಲೋಕನಾಥ ಶೆಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಮೇಲಂತಬೆಟ್ಟು ಇವರು ಉದ್ಘಾಟಿಸಿದರು.

ಭಜನಾ ತರಬೇತಿದಾರರಾದ ಶ್ರೀಯುತ ಸಂದೇಶ ಮದ್ದಡ್ಕ ಭಾಗವಹಿಸಿ ಕುಣಿತ ಭಜನೆಯ ಮಹತ್ವವನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು. ಕುಣಿತ ಭಜನ ತರಬೇತಿಯ ಜವಾಬ್ದಾರಿಯನ್ನು ವಹಿಸಿದ ಫಲ್ಗುಣಿ ಮಹಿಳಾ ಮಂಡಲದ ಶ್ರೀಮತಿ ಜಯಲಕ್ಷ್ಮಿಗ್ರಾಮ ಪಂಚಾಯಿತಿ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿ ಎಲ್ಲರ ಸಹಕಾರ ಕೋರಿದರು.75 ಮಕ್ಕಳು ಭಜನ ತಂಡದಲ್ಲಿ ಉತ್ಸಾಹದಿಂದ ಸೇರಿಕೊಂಡಿದ್ದಾರೆ.

ಸಮಾರಂಭದಲ್ಲಿ ಭಜನಾ ಮಂಡಳಿ ಉಪಾಧ್ಯಕ್ಷರಾದ ಪ್ರಭಾಕರ ಭಟ್ ಜಿ, ದಯಾನಂದ ಗೌಡ, ಪ್ರಕಾಶ್ ,ಯೋಗೀಶ್, ಪಂಚಾಯಿತಿ ಸದಸ್ಯರಾದ ಶ್ರೀಮತಿ ಸುಮಲತಾ, ಚಂದ್ರಶೇಖರ್ ಹಾಗೂ ಇದಕ್ಕೆ ಸಹಕರಿಸಿದ ಯೋಗೀಶ್, ಪುರಂದರ ಪೂಜಾರಿ, ಸಂತೋಷ್ ಗೌಡ ಮತ್ತು ಫಲ್ಗುಣಿ ಮಹಿಳಾ ಮಂಡಲದ ಶ್ರೀಮತಿ ವೀಣಾ ಗಣೇಶ್ ಭಂಡಾರಿ ,ಭಾರತಿ ಸತೀಶ್ ಶೆಟ್ಟಿ ,ಸುಮಲತಾ ಜಯ ಶೆಟ್ಟಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಣೆಯನ್ನು ಶ್ರೀಯುತ ಗಣೇಶ್ ಭಂಡಾರಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷರು ನಡೆಸಿಕೊಟ್ಟರು.

- Advertisement -

Latest News

error: Content is protected !!