Wednesday, June 3, 2026
Homeಕರಾವಳಿಡಾ. ಯಶೋವರ್ಮ ಅವರ ಪಾರ್ಥಿವ ಶರೀರ ತರಲು ವಿದೇಶಾಂಗ ಸಚಿವಾಲಯ ಮತ್ತು ಸಿಂಗಾಪುರ ಹೈಕಮಿಷನ್ ಸಂಪರ್ಕ...

ಡಾ. ಯಶೋವರ್ಮ ಅವರ ಪಾರ್ಥಿವ ಶರೀರ ತರಲು ವಿದೇಶಾಂಗ ಸಚಿವಾಲಯ ಮತ್ತು ಸಿಂಗಾಪುರ ಹೈಕಮಿಷನ್ ಸಂಪರ್ಕ :ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್

- Advertisement -
- Advertisement -

ನವದೆಹಲಿ: ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ. ಯಶೋವರ್ಮ ಅವರ ನಿಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಆತ್ಮೀಯರಾದ ಡಾ. ಯಶೋವರ್ಮ ಅವರ ನಿಧನದ ಸುದ್ದಿ ಅತೀವ ದುಃಖವನ್ನು ತಂದಿದೆ‌ ಎಂದು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ,
ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಮಂಜುನಾಥ ಸ್ವಾಮಿ ನೀಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದ್ದಾರೆ.

ಡಾ. ಯಶೋವರ್ಮ ಅವರ ಮೃತದೇಹವನ್ನು ಆದಷ್ಟು ಬೇಗ ಸ್ವದೇಶಕ್ಕೆ ತೆಗೆದುಕೊಂಡು ಬರುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ವಿದೇಶಾಂಗ ಸಚಿವರ ಕಾರ್ಯಾಲಯ ಹಾಗೂ ಸಿಂಗಾಪುರ ಹೈ ಕಮಿಷನ್ ಅನ್ನು ಸಂಪರ್ಕಿಸಲಾಗಿದೆ ಎಂದು ಹೇಳಿರುವ ಶೋಭಾ ಕರಂದ್ಲಾಜೆ,
ತಾಯ್ನಾಡಿಗೆ ಅವರ ಮೃತದೇಹವನ್ನು ಕರೆತರಲು ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!