Thursday, June 4, 2026
Homeಕರಾವಳಿಉಪ್ಪಳ: ಕಾರು-ಬೈಕ್ ನಡುವೆ ಅಪಘಾತ, ಪಿಯುಸಿ ವಿದ್ಯಾರ್ಥಿ ಸಾವು

ಉಪ್ಪಳ: ಕಾರು-ಬೈಕ್ ನಡುವೆ ಅಪಘಾತ, ಪಿಯುಸಿ ವಿದ್ಯಾರ್ಥಿ ಸಾವು

- Advertisement -
- Advertisement -

ಉಪ್ಪಳ: ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪದಳ ತುರುತಿಯ ಮೂಸಾ ಮತ್ತು ಜೈನಾಬ್ ದಂಪತಿಯ ಪುತ್ರ ಅಬೂಬಕ್ಕರ್ ಇಶಾನ್ (19) ಮೃತ ದುರ್ದೈವಿ.

ಉಪ್ಪಳ ಹಿದಾಯತ್ ನಗರ ಶೇಖ್ ಅಹಮದ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ 7.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಇಶಾನ್ ಪ್ರಯಾಣಿಸುತ್ತಿದ್ದ ಬೈಕ್ ಎದುರುಗಡೆಯಿಂದ ಬರುತ್ತಿದ್ದ ಮಾರುತಿ ಬ್ರೆಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ 12ನೇ ತರಗತಿಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಅಪಘಾತದಲ್ಲಿ ಮೃತಪಟ್ಟಿದ್ದಾನೆ.

- Advertisement -

Latest News

error: Content is protected !!