Saturday, June 6, 2026
HomeUncategorizedವಿದ್ಯುತ್ ಶಾಕ್ ತಗುಲಿ ಪುತ್ತೂರಿನಲ್ಲಿ ಕೇಬಲ್ ಆಪರೇಟರ್ ಸಾವು

ವಿದ್ಯುತ್ ಶಾಕ್ ತಗುಲಿ ಪುತ್ತೂರಿನಲ್ಲಿ ಕೇಬಲ್ ಆಪರೇಟರ್ ಸಾವು

- Advertisement -
- Advertisement -

ಪುತ್ತೂರು : ಬಿಎಸ್ಸೆನ್ನೆಲ್ ಕೇಬಲ್ ಅಳವಡಿಕೆಗಾಗಿ ವಿದ್ಯುತ್ ಕಂಬ ಏರಿದ್ದ ಮೇಲೆ ವಿದ್ಯುತ್ ಶಾಕ್ ತಗುಲಿ ಕೇಬಲ್ ಆಪರೇಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆರ್ಲಪದವು ನಿವಾಸಿ ಪದ್ಮನಾಭ ಪಾಣಾಜೆ(44) ಮೃತ ದುರ್ದೈವಿ. ನಿನ್ನೆ ಪುತ್ತೂರು ನಗರದ ಕೋರ್ಟ್ ರಸ್ತೆಯ ಮೀನು ಮಾರುಕಟ್ಟೆ ಬಳಿಯ ವಿದ್ಯುತ್ ಕಂಬಕ್ಕೆ ಹತ್ತಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪದ್ಮನಾಭ ಅವರು ಬಿಎಸ್ಸೆನ್ನೆಲ್ ಗುತ್ತಿಗೆದಾರ ಸಂಸ್ಥೆ ಶ್ರೀ ಅಸೋಸಿಯೇಟೆಡ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ವಿದ್ಯುತ್ ಶಾಕ್ ತಗುಲಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!