Wednesday, May 1, 2024
Homeತಾಜಾ ಸುದ್ದಿಜನವರಿ 1 ರಿಂದ ಫಾಸ್ಟ್ಯಾಗ್ ಇಲ್ಲದೇ ವಾಹನ ಚಲಾಯಿಸಿದ್ರೆ ದುಪ್ಪಟ್ಟು ಶುಲ್ಕ

ಜನವರಿ 1 ರಿಂದ ಫಾಸ್ಟ್ಯಾಗ್ ಇಲ್ಲದೇ ವಾಹನ ಚಲಾಯಿಸಿದ್ರೆ ದುಪ್ಪಟ್ಟು ಶುಲ್ಕ

spot_img
- Advertisement -
- Advertisement -

ನವದೆಹಲಿ : ಹೆದ್ದಾರಿಗಳ ಟೋಲ್ ಗಳಲ್ಲಿ ಗಂಟೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿವಾರಿಸಲು ಡಿಜಿಟಲೀಕರಣ ಹಾಗೂ ನಗದು ರಹಿತ ವ್ಯವಹಾರ ಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ವರ್ಷದ ಹಿಂದೆಯೇ ಫಾಸ್ಟ್ಯಾಗ್ ಜಾರಿಗೊಳಿಸಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 2021ರ ಜನವರಿ 1ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ. ಈ ನಿಯಮದಂತೆ ರಾಜ್ಯದ 36 ಟೋಲ್ ಗಳು, ದೇಶಾದ್ಯಂತ 593 ಟೋಲ್ ಗಳು ಫಾಸ್ಟ್ಯಾಗ್ ಲೇನ್ ಗಳಾಗಿ ಕಾರ್ಯನಿರ್ವಹಿಸಲಿವೆ.

2021 ರ ಜನವರಿ 1 ರಿಂದ ಟೋಲ್ ಪ್ಲಾಜಾಗಳಲ್ಲಿನ ನಗದು ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ರದ್ದು ಮಾಡಲಾಗುತ್ತಿದ್ದು, ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ವಾಹನ ದಟ್ಟಣೆ ಕಡಿಮೆ ಮಾಡುವುದು, ಇಂಧನ ಉಳಿತಾಯ ಸೇರಿ ಇನ್ನಿತರ ಕಾರಣಗಳಿಂದಾಗಿ ಟೋಲ್ ಶುಲ್ಕವನ್ನು ಫ್ಯಾಸ್ಟ್ಯಾಗ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಒಂದು ವೇಳೆ ಫಾಸ್ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಪಥದಲ್ಲಿ ಸಂಚರಿಸಿದರೆ, ದುಪ್ಪಟ್ಟು ಶುಲ್ಕ ಪಾವತಿಸಿ ತೆರಳುವ ನಿಯಮ ಜಾರಿಗೊಳಿಸಲಾಗಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1981ರ ತಿದ್ದುಪಡಿಯಂತೆ 2017ರ ಡಿಸೆಂಬರ್ 1ಕ್ಕೆ ಮುನ್ನ ಮಾರಾಟವಾಗಿರುವ ಎಲ್ಲಾ ‘ಎಂ’ ಮತ್ತು ‘ಎನ್’ ವರ್ಗದ ಹಳೆಯ ಮೋಟಾರು ವಾಹನಗಳಿಗೂ(ದ್ವಿಚಕ್ರ ವಾಹನಗಳಿಗೆ) ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ.

ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಅನ್ವಯ 2017ರ ಡಿಸೆಂಬರ್ 1 ರ ನಂತರ ನೋಂದಾಯಿಸಲ್ಪಟ್ಟಿರುವ ಎಲ್ಲಾ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಗೊಳಿಸಲಾಗಿದೆ. ಜೊತೆಗೆ ಕ್ಷಮತಾ ಪ್ರಮಾಣಪತ್ರ(ಫಿಟ್ ನೆಸ್ ಸರ್ಟಿಫಿಕೇಟ್) ಅನ್ನು ನವೀಕರಣ ಮಾಡಿಕೊಡಬೇಕು ಎಂದು ಕಡ್ಡಾಯ ಗೊಳಿಸಲಾಗಿದೆ.

- Advertisement -
spot_img

Latest News

error: Content is protected !!