- Advertisement -
![]()
- Advertisement -
ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿರುವಂತೆಯೇ ಖಾಸಗಿ ಬಂಕುಗಳಲ್ಲಿಯೂ ಕೂಡ ಇಂಧನ ದರ ಏರಿಕೆಯಾಗತೊಡಗಿದೆ.
ಶೆಲ್ ಬಂಕ್ ಗಳಲ್ಲಿ ವಿ ಪವರ್ ಪೆಟ್ರೋಲ್ ಲೀಟರ್ಗೆ 99.55 ರೂ. ಇದ್ದರೆ, ಸಾಮಾನ್ಯ ಪೆಟ್ರೋಲ್ ಲೀಟರ್ಗೆ 92.00 ರೂ. ಇದೆ. ವಿ ಪವರ್ ಡೀಸೆಲ್ ಲೀಟರ್ಗೆ 88.50 ರೂ. ಇದ್ದರೆ ಸಾಮಾನ್ಯ ಡೀಸೆಲ್ ಲೀಟರ್ಗೆ 79.50 ರೂ.ಇದೆ.
ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳ ದರಗಳಿಗಿಂತ ಶೆಲ್ ಬಂಕ್ ಗಳಲ್ಲಿ ದರ ಹೆಚ್ಚಾಗಿದೆ. ವಿ ಪವರ್ ಪೆಟ್ರೋಲ್ ದರ 13.04 ರೂಪಾಯಿ, ಸಾಮಾನ್ಯ ಪೆಟ್ರೋಲ್ 5.49 ರೂಪಾಯಿ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಬಂಕ್ಗಳಲ್ಲಿ 15 ದಿನದಿಂದೀಚೆಗೆ ಪೆಟ್ರೋಲ್ ಹಾಗೂ ಇಂಧರ ದರ ಸ್ಥಿರವಾಗಿದೆ.
- ಇಂಡಿಯನ್ ಆಯಿಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 86.51 ರೂ. ಹಾಗೂ ಡೀಸೆಲ್ಗೆ 78.31 ರೂ.ಇದೆ.
- ಭಾರತ್ ಪೆಟ್ರೋಲಿಯಂ ಕಂಪನಿಯ ಬಂಕ್ಗಳಲ್ಲಿ ಪೆಟ್ರೋಲ್ಗೆ 86.47 ರೂ. ಹಾಗೂ ಡೀಸೆಲ್ಗೆ 78.27 ರೂ.ಇದೆ.
- ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್ಗಳಲ್ಲಿ ಇರುವ ಇಂಧನ ದರವೂ ಐಒಸಿ ಹೊಲಿಸಿದರೆ 4-5 ಪೈಸೆ ಕಡಿಮೆ ಇದೆ.
- ಖಾಸಗಿ ಸಂಸ್ಥೆಗಳ ನಾಯರಾ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ದರ 86.75 ರೂ. ಹಾಗೂ ಡೀಸೆಲ್ ದರ 78.30 ರೂ. ಇದೆ.
- ಎಸ್ಸಾರ್ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ಗೆ 86.76 ರೂ. ಹಾಗೂ ಡೀಸೆಲ್ಗೆ 76.32 ರೂ. ಇದೆ.
- Advertisement -


