- Advertisement -
- Advertisement -
ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಕಾಲು ಮೇಲೆ ಬಸ್ ಹರಿದು ಗಂಭೀರ ಗಾಯವಾಗಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ಉಪ್ಪಿನಂಗಡಿಯ ಗಾಂಧಿಪಾರ್ಕ್ ನಿವಾಸಿ ಅಬ್ದುಲ್ ರಜಾಕ್ ಎಂಬುವರ ಪುತ್ರ ಮಹಮ್ಮದ್ ಅಝೀಂ (18) ಗಾಯಗೊಂಡ ವಿದ್ಯಾರ್ಥಿ.
ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಮಹಮ್ಮದ್ ಅಝೀಂ, ಕಾಲೇಜಿಗೆ ಹೋಗಲು ಬಸ್ ಹತ್ತುವ ವೇಳೆ ಅವಘಡ ನಡೆದಿದೆ. ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಧನ್ಯರಾಜ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸ್ ಹಿಂದಕ್ಕೆ ಚಲಿಸಿದ್ದು ಅನಾಹುತಕ್ಕೆ ಕಾರಣ ಎನ್ನಲಾಗಿದೆ.
- Advertisement -