Saturday, June 6, 2026
Homeಅಪರಾಧಕಂಠಪೂರ್ತಿ ಕುಡಿದು ಯದ್ವಾತದ್ವ ಬಸ್‌ ಚಲಾಯಿಸಿದ ಚಾಲಕ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಪೊಲೀಸರ...

ಕಂಠಪೂರ್ತಿ ಕುಡಿದು ಯದ್ವಾತದ್ವ ಬಸ್‌ ಚಲಾಯಿಸಿದ ಚಾಲಕ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಪೊಲೀಸರ ವಶಕ್ಕೆ

- Advertisement -
- Advertisement -

ಉಪ್ಪಿನಂಗಡಿ: ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಕೆಎ 19 ಎಫ್3324 ಕೆಎಸ್ಸಾರ್ಟಿಸಿ ಬಸ್ ಚಾಲಕನೊಬ್ಬ, ಮದ್ಯದ ಅಮಲಿನಲ್ಲಿದ್ದು ಪ್ರಯಾಣಿಕರನ್ನು ಭೀತಿಗೆ ಒಳಪಡಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡಿದಿದೆ.

ಮದ್ಯದ ಅಮಲಿನಲ್ಲಿದ್ದ ಚಾಲಕ ಮನಸ್ಸಿಗೆ ಬಂದಂತೆ ಬಸ್ ಅನ್ನು ಚಾಲಯಿಸುತ್ತಿದ್ದು, ಬಸ್ ನಲ್ಲಿದ್ದಂತಹ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಯಾಣಿಕರೆಲ್ಲ ಭಯದಿಂದ ಕೂಗಾಡತೊಡಗಿದರು.

ಸ್ಥಳೀಯ ನಾಗರಿಕರು ಇದನ್ನು ಗಮನಿಸಿ, ಬಸ್ಸನ್ನು ಬಲವಂತವಾಗಿ ನಿಲ್ಲಿಸಿ ಚಾಲಕನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸ್ಥಳೀಯರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಬಸ್ ಅನ್ನು ನಿರ್ವಾಹಕರೇ ಚಲಾಯಿಸಿಕೊಂಡು ತೆರಳಿದ್ದಾರೆ ಎನ್ನಲಾಗಿದೆ. 

- Advertisement -

Latest News

error: Content is protected !!