Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚಾರ್ಮಾಡಿ ಮಸೀದಿಗೆ ನುಗ್ಗಿದ ತಂಡ: ಧರ್ಮಗುರುಗಳ ಮೇಲೆ ತಂಡದಿಂದ ಹಲ್ಲೆ

ಬೆಳ್ತಂಗಡಿ : ಚಾರ್ಮಾಡಿ ಮಸೀದಿಗೆ ನುಗ್ಗಿದ ತಂಡ: ಧರ್ಮಗುರುಗಳ ಮೇಲೆ ತಂಡದಿಂದ ಹಲ್ಲೆ

- Advertisement -
- Advertisement -

ಬೆಳ್ತಂಗಡಿ : ಕ್ಷುಲ್ಲಕ ವಿಚಾರದಲ್ಲಿ ಚಾರ್ಮಾಡಿಯ ಮುಹಿದ್ದಿನ್ ಜುಮ್ಮಾ ಮಸೀದಿ ಧರ್ಮಗುರುಗಳ ಮೇಲೆ ಸುಮಾರು 12 ಜನರ ತಂಡದಿಂದ ಮಸೀದಿಗೆ ಡಿ.17 ರಂದು ಸಂಜೆ ನುಗ್ಗಿ ಹಲ್ಲೆ ಮಾಡಿದ್ದು.ಗಾಯಗೊಂಡ ಧರ್ಮಗುರುಗಳು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮುಹಿದ್ದಿನ್ ಜುಮ್ಮಾ ಮಸೀದಿ ಜಾಲಲಿನಗರದ ಧರ್ಮಗುರುಗಳಾದ ಶಮೀರ್ ಮುಸ್ಲಿಯಾರ್ (37) ಎಂಬವರಿಗೆ ಡಿ.17 ರಂದು ಸಂಜೆ 7:30 ರ ಸುಮಾರಿಗೆ ಸ್ಥಳೀಯರಾದ ಬದ್ರುದ್ದಿನ್, ಸಂಶುದ್ದಿನ್, ಅಹಮದ್ ಟಿಬಿ ರೋಡ್, ನೌಫಲ್ ,ಅನ್ಸರ್, ಮುನೀರ್ ಅಸೀಫ್,ಅಫೀಝ್,ಅಫ್ರೀಜ್, ಶರೀಫ್,ಅಬ್ದುಲ್ ಖಾದರ್ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.ಹಲ್ಲೆ ಬಳಿಕ ಮಸೀದಿ ಆವರಣದಲ್ಲಿ ಹಲ್ಲೆದ ಮಾಡಿದ ತಂಡದವರು ಮತ್ತು ಮಸೀದಿಯವರ ಜೊತೆ ಗಲಾಟೆ ನಡೆದಿದ್ದು.ಈ ಬಗ್ಗೆ ವಿಡಿಯೋ ವೈರಲ್ ಅಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಧರ್ಮಗುರುಗಳು  ದೂರು ನೀಡಲಾಗಿದ್ದು. ಪೊಲೀಸರು ತಬಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!