Wednesday, June 24, 2026
Homeಕರಾವಳಿವಿಟ್ಲದಲ್ಲಿ ಒಡ ಹುಟ್ಟಿದ ತಮ್ಮನನ್ನೇ ಕೊಲೆಗೈದ ಅಣ್ಣ

ವಿಟ್ಲದಲ್ಲಿ ಒಡ ಹುಟ್ಟಿದ ತಮ್ಮನನ್ನೇ ಕೊಲೆಗೈದ ಅಣ್ಣ

- Advertisement -
- Advertisement -

ವಿಟ್ಲ: ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ವಿಟ್ಲದ ಶಿರಂಕಲ್ಲು ನಂದರಬೆಟ್ಟುವಿನಲ್ಲಿ ನಡೆದಿದೆ.

ಬಾಲಪ್ಪ ನಾಯ್ಕ ಮೃತ ದುರ್ದೈವಿ. ಬಾಲಪ್ಪ ನಾಯ್ಕರನ್ನು ಅಣ್ಣ ಐತ್ತಪ್ಪ ನಾಯ್ಕ ಕೊಲೆಗೈದಿದ್ದಾನೆ. ಬಾಲಪ್ಪ ನಾಯ್ಕ ಹಾಗೂ ಐತ್ತಪ್ಪ ನಾಯ್ಕ ಅವರ ಮಧ್ಯೆ ಕೆಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.ನಿನ್ನೆ ಅವರ ಹೊಸ ಮನೆಯಲ್ಲಿ ಗೊಂಧೋಳ ಪೂಜೆ ನಡೆಯುತ್ತಿತ್ತು. ಈ ವೇಳೆ ಹಳೆ ಮನೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ತಾರಕ್ಕೇರಿ ಅಣ್ಣ ತಮ್ಮನನ್ನೇ ಕೊಲೆಗೈದಿದ್ದಾನೆ. ಆರೋಪಿ ಐತ್ತಪ್ಪ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!