Thursday, June 4, 2026
Homeಕರಾವಳಿಪಾಲ್ತಾಡಿಯಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಸಹೋದರನಿಂದಲೇ ಶೇಷಪ್ಪ ಪೂಜಾರಿಯ ಕೊಲೆ

ಪಾಲ್ತಾಡಿಯಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಸಹೋದರನಿಂದಲೇ ಶೇಷಪ್ಪ ಪೂಜಾರಿಯ ಕೊಲೆ

- Advertisement -
- Advertisement -

ಬೆಳ್ಳಾರೆ: ಇಲ್ಲಿನ ಪಾಲ್ತಾಡಿ ಎಂಬಲ್ಲಿ ಗುಡ್ಡವೊಂದರಲ್ಲಿ ಶೇಷಪ್ಪ ಪೂಜಾರಿ ಎಂಬ ಶವ ಪತ್ತೆಯಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಶೇಷಪ್ಪ ಪೂಜಾರಿ ಅವರ ಶವ ಪತ್ತೆಯಾಗುತ್ತಿದ್ದಂತೆ ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಶೇಷಪ್ಪ ಪೂಜಾರಿ ಅವರ ಸಹೋದರ ಹಾಗೂ ಆತನ ಪುತ್ರ ಅವರನ್ನು ಕೊಲೆಗೈದಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೇಷಪ್ಪ ಪೂಜಾರಿ ಸಹೋದರ ಬಾಲಕೃಷ್ಣ ಹಾಗೂ ಪುತ್ರ ವೇಣುಗೋಪಾಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಶೇಷಪ್ಪ ಪೂಜಾರಿ ಅವರ ಮೃತದೇಹ ಬೊಳಿಯಾಲ ಎಂಬಲ್ಲಿ ಗೇರುತೋಟದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಅನುಮಾನಗೊಂಡ ಕುಟುಂಬದವರು ಕೊಲೆ ಶಂಕೆಯ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ನಡೆಸಿದಾಗ ಆಸ್ತಿಗಾಗಿ ಶೇಷಪ್ಪ ಪೂಜಾರಿ ಅವರ ಸಹೋದರ ಬಾಲಕೃಷ್ಣ ಹಾಗೂ ಆತನ ಮಗ ವೇಣುಗೋಪಾಲ ಆಸ್ತಿಗಾಗಿ ಕೊಲೆ ಮಾಡಿರೋದು ಬಯಲಾಗಿದೆ. ಇದೀಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

- Advertisement -

Latest News

error: Content is protected !!