Wednesday, June 3, 2026
Homeತಾಜಾ ಸುದ್ದಿಮದುವೆ ಮಂಟಪದಿಂದ ನೇರವಾಗಿ ಎಕ್ಸಾಂ ಹಾಲ್ ಗೆ ಬಂದ ವಧು!

ಮದುವೆ ಮಂಟಪದಿಂದ ನೇರವಾಗಿ ಎಕ್ಸಾಂ ಹಾಲ್ ಗೆ ಬಂದ ವಧು!

- Advertisement -
- Advertisement -

ಮಂಡ್ಯ: ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ನವವಧು ಪರೀಕ್ಷೆ ಬರೆದಿದ್ದಾಳೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿಯಲ್ಲಿ ಮಂಟಪದಲ್ಲಿ ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷಾ ಕೆಂದ್ರಕ್ಕೆ ಬಂದು ನವವಿವಾಹಿತೆ ಐಶ್ವರ್ಯ ಪರೀಕ್ಷೆ ಬರೆದಿದ್ದಾಳೆ.

ನಿನ್ನೆ ಐಶ್ವರ್ಯ ಹಾಗೂ ಅವಿನಾಶ್ ವಿವಾಹವಾಗಿದ್ದು, ತಾಳಿ ಕಟ್ಟಿಸಿಕೊಂಡು ನೇರವಾಗಿ ಚಿನಕುರುಳಿಯ ಎಸ್ ಟಿ ಜಿ ಕಾಲೇಜ್ ಆಗಮಿಸಿ ಐಶ್ವರ್ಯ ಪರೀಕ್ಷೆ ಬರೆದಿದ್ದಾಳೆ.

ಪ್ರಥಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಐಶ್ವರ್ಯಗೆ ನಿನ್ನೆ ಡಿಜಿಟಲ್ ಫ್ಲೊಯೆನ್ಸಿ ವಿಷಯದ ಪರೀಕ್ಷೆಯಿತ್ತು.

ಪರೀಕ್ಷೆ ಮುಗಿಯುವ ತನಕ ಕಾಲೇಜ್ ಕ್ಯಾಂಪಸ್ ನಲ್ಲಿ ಕಾದು ಬಳಿಕ ಮನೆಗೆ ಕರೆದು ಕೊಂಡು ಹೋದ ಪತಿ ಹಾಗೂ ಕುಟುಂಬಸ್ಥರು
ಪರೀಕ್ಷೆ ಮುಗಿದ ಬಳಿಕ ಮನೆ ತುಂಬಿಸಿಕೊಂಡಿದ್ದಾರೆ.

- Advertisement -

Latest News

error: Content is protected !!