Wednesday, June 3, 2026
Homeಕರಾವಳಿಉಡುಪಿಉಡುಪಿ: ಲವ್‌ ಜಿಹಾದ್‌ ವಿಷ ಬೀಜ ಬಿತ್ತುತ್ತಿರುವ ಬಾಲಿವುಡ್‌ ಸಿನಿಮಾಗಳನ್ನು ಬಹಿಷ್ಕರಿಸಿ: ಕಾಜಲ್ ಹಿಂದುಸ್ತಾನಿ

ಉಡುಪಿ: ಲವ್‌ ಜಿಹಾದ್‌ ವಿಷ ಬೀಜ ಬಿತ್ತುತ್ತಿರುವ ಬಾಲಿವುಡ್‌ ಸಿನಿಮಾಗಳನ್ನು ಬಹಿಷ್ಕರಿಸಿ: ಕಾಜಲ್ ಹಿಂದುಸ್ತಾನಿ

- Advertisement -
- Advertisement -

ಉಡುಪಿ: ಬಾಲಿವುಡ್‌ ಸಿನಿಮಾಗಳು ಲವ್‌ ಜಿಹಾದ್‌ನ ವಿಷದ ಬೀಜ ಬಿತ್ತುತ್ತಿವೆ. ದಕ್ಷಿಣ ಭಾರತೀಯರು ಬಾಲಿವುಡ್‌ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದುಸ್ತಾನಿ ಕರೆ ನೀಡಿದ್ರು.

ಜಿಲ್ಲೆಯಲ್ಲಿ ನಡೆದ ದುರ್ಗಾದೌಡ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಾಲಿವುಡ್‌ನ ಸಿನಿಮಾಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ. ದಕ್ಷಿಣ ಭಾರತೀಯರು ಕರಣ್‌ ಜೋಹರ್‌ನನ್ನ ಬಹಿಷ್ಕರಿಸಿ ಎಂದರು. ಬಾಲಿವುಡ್ ಸಿನಿಮಾದಲ್ಲಿ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ. ಪ್ರೀತಿ , ಅಕ್ರಮ ಮದುವೆ ಮಾಡಿಕೊಳ್ಳುವವರೆಂದು ಹಿಂದೂ ಮಹಿಳೆಯರನ್ನು ಬಿಂಬಿಸಲಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಹಿಂದೂ ಮಹಿಳೆಯರು ಎಂದೂ ಹೀಗೆ ಮಾಡುವುದಿಲ್ಲ. ಬಾಲಿವುಡ್ ನ ಕೊಳಕು ಸಿನಿಮಾಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ ಎಂದರು.

- Advertisement -

Latest News

error: Content is protected !!