Tuesday, May 7, 2024
Homeತಾಜಾ ಸುದ್ದಿ13 ವರ್ಷದ ಬಾಲಕನನ್ನು ಹೆಣ್ಣಾಗಿ ಪರಿವರ್ತಿಸಿ ನಿರಂತರ ಅತ್ಯಾಚಾರ

13 ವರ್ಷದ ಬಾಲಕನನ್ನು ಹೆಣ್ಣಾಗಿ ಪರಿವರ್ತಿಸಿ ನಿರಂತರ ಅತ್ಯಾಚಾರ

spot_img
- Advertisement -
- Advertisement -

ನವದೆಹಲಿ :13 ವರ್ಷದ ಬಾಲಕನ ಲಿಂಗವನ್ನು ಬಲವಂತವಾಗಿ ಬದಲಾಯಿಸಿ ಆತನ ಮೇಲೆ 6 ಮಂದಿ ಯುವಕರು ಹಲವಾರು ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ ನಡೆಸಿದ ಭೀಕರ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಲಕ್ಷ್ಮೀ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬಾಲಕ ಪಾಲ್ಗೊಂಡಿದ್ದ. ಈ ವೇಳೆ ಪರಿಚಿತರಾದ ಯುವಕರ ಗುಂಪು ಮತ್ತೊಂದು ರೀತಿಯ ಡ್ಯಾನ್ಸ್ ಹೇಳಿಕೊಡುವುದಾಗಿ ನಂಬಿಸಿ ಮಾಂಡವಳ್ಳಿಗೆ ಕರೆದೊಯ್ದರು.

ಮತ್ತೊಂದು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಪ್ರದರ್ಶನಕ್ಕಾಗಿ ಹಣ ನೀಡಿದರು. ಅಲ್ಲದೇ ಇದೇ ರೀತಿ ನಮ್ಮ ಜೊತೆ ಇದ್ದು ಡ್ಯಾನ್ಸ್ ಕಲಿತರೆ ಒಳ್ಳೆಯ ಆದಾಯ ಮಾಡಿಕೊಡುವುದಾಗಿ ನಂಬಿಸಿದರು. ನನಗೆ ಮತ್ತು ಬರುವ ಔಷಧಗಳನ್ನು ನೀಡಿ ಪ್ರಜ್ಞೆ ತಪ್ಪಿಸಿದರು. ನಂತರ ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿಸಿದ್ದೂ ಅಲ್ಲದೇ ಹಾರ್ಮೊನ್ ಬದಲಾಗುವ ಔಷಧಗಳನ್ನು ನೀಡಿ ಹೆಣ್ಣಾಗಿ ಪೂರ್ತಿ ಬದಲಾಗುವಂತೆ ಮಾಡಿದರು ಎಂದು ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಘಟನೆಯನ್ನು ವಿವರಿಸಿದ್ದಾನೆ.

ಲಿಂಗ ಪರಿವರ್ತನೆ ಮಾಡಿದ ನಂತರ ಯುವಕರು ನನ್ನ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದೂ ಅಲ್ಲದೇ ಬೇರೆಯವರನ್ನು ಕರೆದುಕೊಂಡು ಬಂದು ಲೈಂಗಿಕವಾಗಿ ಶೋಷಣೆ ಮಾಡಿದರು. ನಂತರ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವಂತೆ ಮಾಡಿದರು ಎಂದು ಬಾಲಕ ತನ್ನ ಗೋಳಿನ ಕಥೆಯನ್ನು ವಿವರಿಸಿದ್ದಾನೆ.

ಒಂದು ದಿನ ಬಾಲಕನ ಸ್ನೇಹಿತನನ್ನು ಗುಂಪು ಕರೆದುಕೊಂಡು ಬಂದಾಗ ಬಾಲಕನಲ್ಲಿ ಆಸೆ ಚಿಗುರಿದ್ದು, ಇಬ್ಬರೂ ಇವರ ಹಿಡಿತದಿಂದ ಪಾರಾಗಿ ಮನೆಗೆ ಮರಳಿದರು. ತಾಯಿಯ ನೆರವಿನಿಂದ ಇಬ್ಬರೂ ಯಾರಿಗೂ ಗೊತ್ತಾಗದ ಬಾಡಿಗೆ ಮನೆಯೊಂದಲ್ಲಿ ವಾಸ ಮಾಡತೊಡಗಿದರು. ಆದರೆ ಕೆಲವೇ ದಿನಗಳಲ್ಲಿ ಇವರ ಜಾಗವನ್ನು ಪತ್ತೆ ಹಚ್ಚಿದ ಗುಂಪು ಮತ್ತೆ ಅವರನ್ನು ಅಪಹರಿಸಿ ಇಬ್ಬರ ಮೇಲೂ ಅತ್ಯಾಚಾರ ನಡೆಸಿದರು. ಕೆಲವು ದಿನಗಳ ಹಿಂಸೆ ನಂತರ ಇಬ್ಬರೂ ಪತ್ತೆ ಪರಾರಿಯಾಗುವಲ್ಲಿ ಯಶಸ್ವಿಯಾಗಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಒಂದು ಇಡೀ ದಿನ ಬಚ್ಚಿಟ್ಟುಕೊಂಡಿದ್ದರು. ಈ ಸಮಯದಲ್ಲಿ ಇಬ್ಬರನ್ನು ಗಮನಿಸಿದ ವಕೀಲರೊಬ್ಬರು ಪತ್ತೆ ಹಚ್ಚಿ ಮಹಿಳಾ ಆಯೋಗಕ್ಕೆ ದೂರು ನೀಡಿ ಇಬ್ಬರಿಗೂ ಸೂಕ್ತ ರಕ್ಷಣೆ ಒದಗಿಸಿದ್ದಾರೆ.

Latest News

error: Content is protected !!