Friday, June 5, 2026
Homeಕರಾವಳಿವಿಟ್ಲದಲ್ಲಿ ಶಾಲೆಗೆ ತೆರಳಿದ ಬಾಲಕ ನಾಪತ್ತೆ

ವಿಟ್ಲದಲ್ಲಿ ಶಾಲೆಗೆ ತೆರಳಿದ ಬಾಲಕ ನಾಪತ್ತೆ

- Advertisement -
- Advertisement -

ವಿಟ್ಲ:ಶಾಲೆಗೆ ತೆರಳಿದ್ದ ಬಾಲಕನೊಬ್ಬ ಮನೆಗ ಬಾರದೇ ನಾಪತ್ತೆಯಾಗಿರುವ ಘಟನೆ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ. ನಾಪತ್ತೆಯಾದ ಬಾಲಕನನ್ನು ಹನುಮಂತ ಎಂಬವರ ಮಗ ಗಣೇಶ್ (15) ಎಂದು ಗುರುತಿಸಲಾಗಿದೆ.

 ಬಾಲಕನಿಗೆ ಆನ್-ಲೈನ್ ಕ್ಲಾಸಿಗೆಂದು ಮೊಬೈಲ್ ತೆಗೆದುಕೊಡಲಾಗಿತ್ತು.ಆದರೆ ಆತ ಅದರಲ್ಲಿ  ಪಬ್ ಜೀ ಆಟ ಆಡುತ್ತಾ ಸಮಯ ಕಳೆಯುತ್ತಿದ್ದ. ಹಾಗಾಗಿ ಆತನ ತಂದೆ ಹಲವು ಬಾರಿ ಬುದ್ಧಿ ಹೇಳಿದ್ದರು . ಆದರೂ ಆತ ಆಡೋದನ್ನು ಮುಂದುವರಿಸಿದ್ದ. ಹಾಗಾಗಿ  ಗಮನಿಸಿದ ತಂದೆಯು ಶಾಲಾ ಶಿಕ್ಷಕರಿಗೆ ವಿಷಯ ತಿಳಿಸಿದ್ದರು. ಅವರು ಗಣೇಶನಿಗೆ ಬುದ್ದಿವಾದ ಹೇಳಿದ್ದರು.ಅಲ್ಲದೇ  ನಿನ್ನೆ ಶಿಕ್ಷಕರು ಶಾಲೆಗೆ ಬರುವಂತೆ ಹೇಳಿದ್ದರು.

ಅದರಂತೆ ನಿನ್ನೆ ಶಾಲೆಗೆ ಹೋಗಿದ್ದ ಗಣೇಶ್, ಮಧ್ಯಾಹ್ನ ಶಾಲೆ ಬಿಟ್ಟು ಬಂದವನು ಈವರೆಗೆ ಮನೆಗೆ ಬರದೇ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬಾಲಕನ ತಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!