Friday, June 5, 2026
Homeತಾಜಾ ಸುದ್ದಿಹೈಸ್ಕೂಲ್ ವಿರ್ದಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ 17 ವರ್ಷದ ಬಾಲಕ

ಹೈಸ್ಕೂಲ್ ವಿರ್ದಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ 17 ವರ್ಷದ ಬಾಲಕ

- Advertisement -
- Advertisement -

ಚೆನ್ನೈ : ಹೈಸ್ಕೂಲ್ ವಿರ್ದಾರ್ಥಿನಿಗೆ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಓದುತ್ತಿರುವ 17 ವರ್ಷದ ಬಾಲಕ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

ಶಾಲಾ ಬಾಲಕಿಯೊಂದಿಗೆ ವಿವಾಹವಾದ ಆರೋಪದ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಬಾಲಾಪರಾಧಿಯನ್ನು ಕಡಲೂರು ಜಿಲ್ಲಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಅಪ್ರಾಪ್ತ ಬಾಲಕಿಯನ್ನು ಕೌನ್ಸೆಲಿಂಗ್ ಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಗೆ ಕರೆದೊಯ್ಯಲಾಗಿದೆ.

ಈ ಘಟನೆಯ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ ಆರೋಪದ ಮೇಲೆ ಮೇಲೆ ಪೊಲೀಸರು ಪಿ.ಬಾಲಾಜಿ ಗಣೇಶ್ (51) ಅವರನ್ನು ಬಂಧಿಸಿದ್ದಾರೆ. ಬಾಲನ್ಯಾಯ ಕಾಯ್ದೆ, ಮಹಿಳಾ ಕಿರುಕುಳ ತಡೆ ಕಾಯ್ದೆ ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!