Wednesday, June 3, 2026
Homeತಾಜಾ ಸುದ್ದಿಭಗತ್ ಸಿಂಗ್ ಪಾತ್ರದ ನಿರ್ವಹಣೆ ಪ್ರಾಕ್ಟೀಸ್ ; ರಿಹರ್ಸಲ್ ಮಾಡಲು ಹೋದ ಬಾಲಕ ಸಾವು

ಭಗತ್ ಸಿಂಗ್ ಪಾತ್ರದ ನಿರ್ವಹಣೆ ಪ್ರಾಕ್ಟೀಸ್ ; ರಿಹರ್ಸಲ್ ಮಾಡಲು ಹೋದ ಬಾಲಕ ಸಾವು

- Advertisement -
- Advertisement -

ಚಿತ್ರದುರ್ಗ: ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ಮಾಡುವ ವೇಳೆ ಬಾಲಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯ ಬಾಲಕ ಸಂಜಯ್ ಗೌಡ (12) ದುರ್ಮರಣಕ್ಕೀಡಾದ ಬಾಲಕನಾಗಿದ್ದು, ಎಸ್ಎಲ್ ವಿ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ವೇಳೆ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಸಿದ್ಧತೆ ನಡೆಸಿದ್ದ ಬಾಲಕ, ಮನೆಗೆ ಬಂದ ಬಳಿಕವೂ ನಿನ್ನೆ ರಿಹರ್ಸಲ್ ಗೆ ಮುಂದಾಗಿದ್ದ ಎಂದು ಹೇಳಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ರಿಹರ್ಸಲ್ ನಡೆಸಿ ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದ ಬಾಲಕ ಸಂಜಯ್, ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಜಿಗಿದಿದ್ದಾನೆ.

ಈ ವೇಳೆ ಬಾಲಕ ಸಂಜಯ್ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದು,
ಪೋಷಕರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಬಳಿಕ ಪೋಷಕರು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!