Wednesday, July 15, 2026
Homeಕರಾವಳಿಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿಕೊಟ್ಟ ನಟ ಸುನಿಲ್ ಶೆಟ್ಟಿ

ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿಕೊಟ್ಟ ನಟ ಸುನಿಲ್ ಶೆಟ್ಟಿ

- Advertisement -
- Advertisement -

ಸುಬ್ರಮಣ್ಯ: ಖ್ಯಾತ ಬಾಲಿವುಡ್ ನಟ ತುಳುನಾಡಿನ ಸುನಿಲ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು.


ಸ್ನೇಹಿತರೊಂದಿಗೆ ಆಗಮಿಸಿದ ಅವರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರ ದರುಶನ ಪಡೆದು, ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಶಿಷ್ಠಚಾರ ವಿಭಾಗದ ಜಯರಾಮ ರಾವ್ ಉಪಸ್ಥಿತರಿದ್ದರು.

ತನ್ನ ಊರು ಉಡುಪಿಯ ಕಾಪು ಜಾತ್ರೆಗೆ ಆಗಮಿಸಿದ ಅವರು ಕುಕ್ಕೆ ಶ್ರೀ ದೇವರ ದರುಶನ ಪಡೆಯಲೆಂದು ಆಗಮಿಸಿದ್ದಾರೆಂದು ತಿಳಿಸಿದರು. ತುಳುನಾಡಿನವರಾದ ಸುನಿಲ್ ಶೆಟ್ಟಿ ಹಿಂದಿ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡಿ ದ್ದು, ಮುಂಬೈನಲ್ಲಿ ನೆಲೆಸಿದ್ದಾರೆ.

- Advertisement -

Latest News

error: Content is protected !!