Sunday, May 5, 2024
Homeಕರಾವಳಿಮಂಗಳೂರು: ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಕ್ರೋಶ

ಮಂಗಳೂರು: ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಕ್ರೋಶ

spot_img
- Advertisement -
- Advertisement -

ಮಂಗಳೂರು: ದೇವಸ್ಥಾನದ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಮತಿ ಇಲ್ಲ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿರುವುದನ್ನು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ತೀವ್ರವಾಗಿ ಖಂಡಿಸಿದ್ದಾರೆ.

ಮಿಥುನ್ ಮಾತನಾಡಿ, ಮೂಲ್ಕಿ ಬಪ್ಪನಾಡು ದೇವಸ್ಥಾನವು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ವಾರ್ಷಿಕ ದೇವಾಲಯದ ಜಾತ್ರೆಯ ಸಮಯದಲ್ಲಿ, ಸುಮಾರು 1.5 ಲಕ್ಷ ಮಲ್ಲಿಗೆಯನ್ನು ದೇವಿಗೆ ಅರ್ಪಿಸಲಾಗುತ್ತದೆ. ಈ ಮಲ್ಲಿಗೆಯನ್ನು ಶಂಕರಪುರದ ಕ್ರಿಶ್ಚಿಯನ್ನರು ಬೆಳೆಸುತ್ತಾರೆ, ಮುಸ್ಲೀಮರು ಮಾರಾಟ ಮಾಡುತ್ತಾರೆ ಮತ್ತು ಹಿಂದೂಗಳು ದೇವಿಗೆ ಅರ್ಪಿಸುತ್ತಾರೆ ಎಂದರು.

“ಬಪ್ಪನಾಡು ರಥದ ಮೇಲಿರುವ ಮುಖ್ಯ ಛಾಯಾಚಿತ್ರ ಬಪ್ಪ ಬ್ಯಾರಿಯದ್ದು. ಈ ಪುಣ್ಯಕ್ಷೇತ್ರ ಇಡೀ ದೇಶಕ್ಕೆ ಮಾದರಿಯಾಗಿದೆ. ವಿವಾದಾತ್ಮಕ ಬ್ಯಾನರ್ ಪ್ರದರ್ಶಿಸಿ ಅವ್ಯವಸ್ಥೆ ಸೃಷ್ಟಿಸಲಾಗಿದೆ. ಬ್ಯಾನರ್‌ನಿಂದಾಗಿ ಜಿಲ್ಲೆಯ ಜನರು ಗೊಂದಲಕ್ಕೊಳಗಾಗಿದ್ದಾರೆ. ಜಿಲ್ಲಾಡಳಿತ ಇನ್ನೂ ಅನಧಿಕೃತ ಬ್ಯಾನರ್ ತೆಗೆದಿಲ್ಲ ಏಕೆ? ಏಕೆ ಹಿಂಜರಿಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

- Advertisement -
spot_img

Latest News

error: Content is protected !!