Thursday, June 4, 2026
Homeಕರಾವಳಿಪುಂಜಾಲಕಟ್ಟೆ - ಚಾರ್ಮಾಡಿ ಅಭಿವೃದ್ಧಿಗೆ 718 ಕೋಟಿ ಅನುದಾನ ಮಂಜೂರು

ಪುಂಜಾಲಕಟ್ಟೆ – ಚಾರ್ಮಾಡಿ ಅಭಿವೃದ್ಧಿಗೆ 718 ಕೋಟಿ ಅನುದಾನ ಮಂಜೂರು

- Advertisement -
- Advertisement -

ಬೆಳ್ತಂಗಡಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾರದ ಶ್ರೀ ನಿತಿನ್‌ ಗಡ್ಕರಿಯವರು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ 35 ಕಿ.ಮೀಟರ್ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ 718 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ‌.

ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆಯ ಟೆಂಡರ್ ಪ್ರಕ್ರಿಯೆ ಇನ್ನೂ ಒಂದು ತಿಂಗಳ ಒಳಗೆ ನಡೆಯಲ್ಲಿದ್ದು ನಂತರ ರಸ್ತೆ ಅಭಿವೃದ್ಧಿ ಕಾರ್ಯ ಶುರುವಾಗಲಿದೆ.

ಪ್ರಧಾನಿಮಂತ್ರಿ ಶ್ರೀ‌ ನರೇಂದ್ರ ಮೋದಿಯವರಿಗೆ ,ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಯಿ ,ಜಿಲ್ಲೆಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಧನ್ಯವಾದವನ್ನು ತಿಳಿಸಿದ್ದಾರೆ.

- Advertisement -

Latest News

error: Content is protected !!