Sunday, June 7, 2026
Homeಕರಾವಳಿರಾಜ್ಯದ 778 ಪ್ರವಾಸಿ ತಾಣಗಳಲ್ಲಿ ಮೂಡಬಿದಿರೆ ತಾಲೂಕಿನ 3 ಪ್ರವಾಸಿ ತಾಣಗಳು

ರಾಜ್ಯದ 778 ಪ್ರವಾಸಿ ತಾಣಗಳಲ್ಲಿ ಮೂಡಬಿದಿರೆ ತಾಲೂಕಿನ 3 ಪ್ರವಾಸಿ ತಾಣಗಳು

- Advertisement -
- Advertisement -

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯಾದ್ಯಂತ ಗುರುತಿಸಿರುವ 778 ಪ್ರವಾಸಿ ತಾಣಗಳಲ್ಲಿ ಮೂಡಬಿದಿರೆ ತಾಲೂಕಿನ ಕೋಡಿಯಡ್ಕ, ಸಮ್ಮಿಲನ ಬಟರ್ ಫ್ಲೈ ಪಾರ್ಕ್, ಬೆಳುವಾಯಿ ಪ್ರದೇಶಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ.

ಪ್ರವಾಸೋದ್ಯಮ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಆನಂದ್ ಸಿಂಗ್ ವಿಧಾನಸಭೆಯಲ್ಲಿ ಇಂದು ಈ ಸ್ಪಷ್ಟೀಕರಣ ನೀಡಿದ್ದಾರೆ. ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರು ಉತ್ತರಿಸಿದ್ದಾರೆ.

ಮೂಡುಬಿದಿರೆ ಪುರಸಭಾ ಪ್ರದೇಶ ಸೇರಿದಂತೆ ತಾಲೂಕಿನಾದ್ಯಾಂತ ಗಣನೀಯವಾಗಿರುವ ನೈಸರ್ಗಿಕ ಮತ್ತು ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿಗಣಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರದ ಮುಂದಿರುವ ಪ್ರಸ್ತಾವನೆಗಳು ಯಾವುವು ಎಂದು ಶಾಸಕ‌ ಕೋಟ್ಯಾನ್ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು.

- Advertisement -

Latest News

error: Content is protected !!