- Advertisement -
![]()
- Advertisement -
ಕಾಸರಗೋಡು: ಇಲ್ಲಿನ ಬಂದರು ಸಮೀಪದ ಕಸಬಾ ತೀರದಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತಪಟ್ಟವರು ಕಾಸರಗೋಡು ಕಸಬಾದ ಆದಿತ್ಯ (22) ಎನ್ನಲಾಗಿದೆ.
ಅವರು ಬಂದರು ಸಮೀಪದ ಅಳಿವೆ ಬಾಗಿಲು ಬಳಿಗೆ ಮೀನು ಹಿಡಿಯಲು ಬಂದಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾರೆ. ಇನ್ನು ಮೃತದೇಹದಲ್ಲಿ ಗಾಯಗಳು ಕಂಡುಬಂದಿದ್ದು, ಅವರ ಮೈಯಲ್ಲಿದ್ದ ಚಿನ್ನಾಭರಣಗಳು ಕೂಡ ನಾಪತ್ತೆಯಾಗಿದೆ.
ಈ ಬಗ್ಗೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಆದಿತ್ಯನ ಬೈಕ್ ಹಾಗೂ ಮೊಬೈಲ್ ಬಂದರು ಬಳಿ ಲಭಿಸಿತ್ತು.
ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
- Advertisement -


